ಶಾಂತಿನಿಕೇತನ (ಪಿಟಿಐ): ಐದನೆಯ ತರಗತಿಯ ವಿದ್ಯಾರ್ಥಿನಿಯೊಬ್ಬಳು ಹಾಸಿಗೆ ಒದ್ದೆ ಮಾಡಿದ್ದಕ್ಕೆ ವಿದ್ಯಾರ್ಥಿನಿಲಯದ ವಾರ್ಡನ್ ಆಕೆಗೆ ಮೂತ್ರ ಕುಡಿಯುವ ಶಿಕ್ಷೆ ವಿಧಿಸಿದ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ.

ರವೀಂದ್ರ ನಾಥ್ ಠಾಗೋರ್ ಸ್ಥಾಪಿಸಿದ್ದ ಪ್ರತಿಷ್ಠಿತ ವಿಶ್ವಭಾರತಿ ವಿಶ್ವವಿದ್ಯಾಲಯದ ಆವರಣದಲ್ಲಿರುವ ಶಾಲೆಯೊಂದರಲ್ಲಿ ಈ ಘಟನೆ ನಡೆದಿದ್ದು, ರಾಷ್ಟ್ರೀಯ ಮಕ್ಕಳ ಹಕ್ಕು ರಕ್ಷಣಾ ಆಯೋಗ ಈ ಸಂಬಂಧ ವಿವಿಗೆ ನೋಟಿಸ್ ನೀಡಲು ನಿರ್ಧರಿಸಿದೆ. ಘಟನೆಯ ಕುರಿತು ತನಿಖೆ ನಡೆಸಲು ವಿಶ್ವಭಾರತಿ ನಾಲ್ಕು ಸದಸ್ಯರ ಸಮಿತಿಯೊಂದನ್ನು ರಚಿಸಿದೆ.

ವಿವರ: ವಿಶ್ವಭಾರತಿ ಆವರಣದ ಕರಬಿ ವಿದ್ಯಾರ್ಥಿನಿಲಯದಲ್ಲಿ ಬಾಲಕಿಯೊಬ್ಬಳು ಅಸ್ವಸ್ಥಳಾಗಿದ್ದಳು. ಹಾಸಿಗೆಯಲ್ಲೇ ಮೂತ್ರ ಮಾಡಿದ್ದಕ್ಕೆ ಕುಪಿತಗೊಂಡ ವಾರ್ಡನ್, ಬೆಡ್ಶೀಟ್ ಆಕೆಯ ಬಾಯಿಯಲ್ಲಿ ಹಿಂಡಿದರು. ಬಾಲಕಿಯ ತಾಯಿ ಮಗಳ ದೇಹಸ್ಥಿತಿ ವಿಚಾರಿಸಲು ಕರೆ ಮಾಡಿದಾಗ ಈ ವಿಚಾರ ಬೆಳಕಿಗೆ ಬಂದಿದೆ. ವಾರ್ಡನ್ ವಿರುದ್ಧ ದೂರು ದಾಖಲಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.