ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಪ್ವರ ಜಿಲ್ಲೆಯ ಸೇನಾ ಕ್ಯಾಂಪ್ ಮೇಲೆ ಶನಿವಾರ ಬೆಳಿಗ್ಗೆ ಹಿಮಕುಸಿತವಾಗಿ ಕಣ್ಮರೆಯಾಗಿದ್ದ ಐದು ಮಂದಿ ಯೋಧರನ್ನು ರಕ್ಷಿಸಲಾಗಿದೆ.

ರಕ್ಷಿಸಲಾಗಿರುವ ಐವರೂ ಯೋಧರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೆಳಿಗ್ಗೆ ಹಿಮಕುಸಿತ ಉಂಟಾಗಿ ಯೋಧರು ಕಾಣೆಯಾಗಿದ್ದರು, ತಕ್ಷಣ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಯಿತು. ಐವರು ಯೋಧರನ್ನು ರಕ್ಷಿಸಲಾಯಿತು ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರತೀಕೂಲ ಹವಾಮಾನದಿಂದಾಗಿ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿತ್ತು. ಇದರ ಮಧ್ಯೆಯೇ ಸೇನಾ ತಂಡ ರಕ್ಷಣಾ ಕಾರ್ಯಾಚರಣೆ ನಡೆಸಿ ಐವರು ಯೋಧರನ್ನು ರಕ್ಷಿಸಿದೆ ಎಂದು ಮೂಲಗಳು ತಿಳಿಸಿವೆ.

ಬಧವಾರದಿಂದೀಚೆಗೆ ಹಿಮಕುಸಿತಕ್ಕೆ ಸೇನೆಯ 15 ಯೋಧರು ಸೇರಿದಂತೆ ಒಟ್ಟು 21 ಮಂದಿ ಸಾವಿಗೀಡಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.