ನವದೆಹಲಿ (ಐಎಎನ್ಎಸ್): ಗುಲಾಬ್ ಗ್ಯಾಂಗ್ ಸಿನಿಮಾ ಬಿಡುಗಡೆಗೆ ಹೇರಿದ್ದ ತಡೆಯಾಜ್ಞೆಯನ್ನು ದೆಹಲಿ ಹೈಕೋರ್ಟ್ ಗುರುವಾರ ತೆರವುಗೊಳಿಸಿದೆ.
ಪ್ರಭಾರ ಮುಖ್ಯ ನ್ಯಾಯಮೂರ್ತಿ ಬಿ.ಡಿ. ಅಹಮದ್ ಅವರನ್ನೊಳಗೊಂಡ ವಿಭಾಗೀಯ ಪೀಠ ಸಿನಿಮಾ ಬಿಡುಗಡೆಗೆ ಹಸಿರು ನಿಶಾನೆ ತೋರಿದೆ. ಈ ಸಿನಿಮಾ ‘ಗುಲಾಬಿ ಗ್ಯಾಂಗ್’ ಸ್ಥಾಪಕಿ ಸಂಪತ್ ಪಾಲ್ ಅವರಿಗೆ ಸಂಬಂಧಪಟ್ಟಿಲ್ಲ ಎಂದು ಸಿನಿಮಾದ ಮುನ್ನ ಪ್ರಕಟಿಸಲಿದೆ ಎಂದು ಪೀಠ ಸಂಪತ್ ಪಾಲ್ ಅವರಿಗೆ ಭರವಸೆ ನೀಡಿ, ತಡೆಯನ್ನು ತೆರವುಗೊಳಿಸಿದೆ.

ಉತ್ತರ ಪ್ರದೇಶದಲ್ಲಿನ ಮಹಿಳಾ ಗುಂಪಾದ ‘ಗುಲಾಬಿ ಗ್ಯಾಂಗ್’ ಸ್ಥಾಪಕಿ ಸಂಪತ್ ಪಾಲ್ ಅವರ ಜೀವನ ಕುರಿತ ಚಿತ್ರ ಇದಾಗಿದೆ ಎಂದು, ಸಿನಿಮಾ ಬಿಡುಗಡೆ ವಿರುದ್ಧ ಪಾಲ್ ಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿ ವಿಚಾರಣೆ ನಡೆಸಿದ ಏಕ ಸದಸ್ಯ ಪೀಠ ಸಿನಿಮಾ ಬಿಡುಗಡೆಗೆ ತಡೆ ನೀಡಿತ್ತು.
ಆದರೆ ಚಿತ್ರತಂಡ ಇದರ ವಿರುದ್ಧ ಮೇಲ್ಮನವಿ ಸಲ್ಲಿಸಿ, ನಿಗದಿಯಂತೆ ಶುಕ್ರವಾರ ಸಿನಿಮಾ ಬಿಡುಗಡೆಗೆ ಅವಕಾಶ ನೀಡಬೇಕೆಂದು ಕೋರಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.