ಬೆಂಗಳೂರು: ಮಣಿಪುರ ಪ್ರಕರಣ ಕುರಿತು ಕಳವಳ ವ್ಯಕ್ತಪಡಿಸಿರುವ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ, ಈಶಾನ್ಯ ರಾಜ್ಯ ಮಣಿಪುರ ಸೇರಿದಂತೆ ರಾಷ್ಟ್ರದ ಜನರ ವಿಶ್ವಾಸ ಮರುಸ್ಥಾಪಿಸುವಂತಹ ಕ್ರಮಗಳನ್ನು ಕೇಂದ್ರ ಸರ್ಕಾರ ತ್ವರಿತವಾಗಿ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಈ ಕುರಿತು ಶನಿವಾರ ಟ್ವೀಟ್ ಮಾಡಿರುವ ಅವರು, ಮಣಿಪುರ ಘಟನೆಯಂತಹ ವಿಕೃತಿಗಳು ದೇಶದ ಇತರೆಡೆ ಹಬ್ಬುವ ಲಕ್ಷಣಗಳು ಗೋಚರಿಸುವ ಮೊದಲು ಕಠಿಣ ಕ್ರಮಗಳನ್ನು ಆರಂಭಿಸಬೇಕು. ಹಿಂಸಾಚಾರ ಮತ್ತು ಸಾವುಗಳ ಸರಣಿ ಕೊನೆಗಾಣಿಸಬೇಕು ಎಂದಿದ್ದಾರೆ.
‘ನಾನು ಪ್ರಧಾನಿಯಾದ ದಿನಗಳಿಂದಲೂ ಈಶಾನ್ಯ ಜನರ ಬಗ್ಗೆ ವಿಶೇಷ ಪ್ರೀತಿ ಇದೆ. ಒಬ್ಬ ನಾಗರಿಕನಾಗಿ ಈಶಾನ್ಯದಲ್ಲಿ ಶಾಂತಿ ಮೂಡುವುದನ್ನು ಬಯಸುತ್ತೇವೆ’ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.