ಗುಲ್ಬರ್ಗ: ಕರ್ನಾಟಕ ಪಶುವೈದ್ಯಕೀಯ ಸಂಘದ ಆಶ್ರಯದಲ್ಲಿ ಡಿಸೆಂಬರ್ 14–15ರಂದು ನಗರದ ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ‘ರಾಜ್ಯಮಟ್ಟದ ಪಶುವೈದ್ಯಕೀಯ ತಾಂತ್ರಿಕ ವಿಚಾರ ಸಂಕಿರಣ–2013’ ನಡೆಯಲಿದೆ.

ಈ ದ್ವೈವಾರ್ಷಿಕ ಸಮ್ಮೇಳನದಲ್ಲಿ ರಾಜ್ಯದಲ್ಲಿ ಗಣನೀಯ ಸೇವೆ ಸಲ್ಲಿಸಿದ 10 ಪಶುವೈದ್ಯರಿಗೆ ‘ಶ್ರೇಷ್ಠ ಪಶುವೈದ್ಯ’ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಂಘದ ಅಧ್ಯಕ್ಷ ಡಾ.ಟಿ.ಶ್ರೀನಿವಾಸ ರೆಡ್ಡಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಉತ್ತರಕನ್ನಡದ ಶಿರಸಿಯ ಡಾ. ಜಿ.ವಿ. ಹೆಗಡೆ, ತುಮಕೂರು ಕುಣಕೇನಹಳ್ಳಿಯ ಡಾ.ಡಿ.ವಿ. ಕಾಂತರಾಜು, ಬೆಂಗಳೂರು ಮಿಲ್ಕ್ ಯೂನಿಯನ್‌ನ ಡಾ.ಟಿ. ಗುರುಲಿಂಗಪ್ಪ, ಬೆಂಗಳೂರು ಪಶು ಆರೋಗ್ಯ ಮತ್ತು ಜೈವಿಕ ಕೇಂದ್ರದ ಡಾ.ಎಂ.ಡಿ.ವೆಂಕಟೇಶ್, ಬೆಂಗಳೂರು ಎನ್ಡಿಆರ್ಎ ಡಾ.ಕೆ.ಪಿ.ರಮೇಶ, ಗುಲ್ಬರ್ಗ ಶರಣಶಿರಸಗಿಯ ಡಾ. ಪ್ರಹ್ಲಾದ್ ಮದ್ದೂರ್, ಮೈಸೂರಿನ ಡಾ.ಅರುಣ, ಕೊಪ್ಪಳದ ಡಾ. ತಿಪ್ಪಣ್ಣ ತಳಕಲ್, ಶಿವಮೊಗ್ಗದ ಡಾ, ವೀರಣ್ಣ ಕೆ.ಸಿ, ಹಾಗೂ ಬಳ್ಳಾರಿಯ ಡಾ. ಟಿ. ಶಶಿಧರ ಅವರಿಗೆ ಈ ಬಾರಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.