ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

289 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ ‘ನ್ಯಾಕ್‌’ ಮಾನ್ಯತೆ ಗರಿ

Last Updated 19 ಮಾರ್ಚ್ 2023, 20:51 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿರುವ ಒಟ್ಟು 430 ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಗಳ ಪೈಕಿ 289 ಕಾಲೇಜುಗಳು ಕಳೆದ ಎರಡು ವರ್ಷಗಳಲ್ಲಿ ‘ನ್ಯಾಕ್‌’ ಮಾನ್ಯತೆ ಪಡೆದಿವೆ. ಇನ್ನೂ 18 ಕಾಲೇಜುಗಳಿಗೆ ಒಂದೆರಡು ವಾರಗಳಲ್ಲಿ ಈ ಮಾನ್ಯತೆ ಸಿಗಲಿದೆ.

ಬೆಂಗಳೂರಿನ ಸರ್ಕಾರಿ ಕಲಾ ಕಾಲೇಜು ಎ+ ಮಾನ್ಯತೆ ಪಡೆದಿದ್ದು, 22 ಕಾಲೇಜುಗಳು ‘ಎ’ ಗ್ರೇಡ್‌ಗೆ ಪಾತ್ರ
ವಾಗಿವೆ. ಉಳಿದಂತೆ 65 ಕಾಲೇಜುಗಳು ‘ಬಿ++’, 95 ಕಾಲೇಜುಗಳು ‘ಬಿ+’ ಮತ್ತು ಉಳಿದ 95 ಕಾಲೇಜುಗಳು ‘ಬಿ’ ಗ್ರೇಡ್‌ಗೆ ಪಾತ್ರವಾಗಿವೆ. 2019ಕ್ಕಿಂತ ಮೊದಲು ಕೇವಲ 30 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು ಮಾತ್ರ ನ್ಯಾಕ್‌ ಮನ್ನಣೆ ಪಡೆದಿದ್ದವು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾ ಯಣ, ‘ನ್ಯಾಕ್‌ ಮಾನ್ಯತೆ ಸಿಕ್ಕಿರುವುದರಿಂದ ಈ ಕಾಲೇಜುಗಳಿಗೆ ರಾಷ್ಟ್ರೀಯ ಉನ್ನತ ಶಿಕ್ಷಣ ಅಭಿಯಾನದ ನಿಧಿ ಸುಲಭ
ವಾಗಿ ಸಿಗಲಿದೆ. ಈ ಮಾನ್ಯತೆಯು ಐದು ವರ್ಷ ಚಾಲ್ತಿಯಲ್ಲಿರುತ್ತದೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT