ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಧಾರಿಸಬೇಕಿದೆ ಶಿಕ್ಷಣ ಕಲಿಕೆಯ ಗುಣಮಟ್ಟ: ಎಎಸ್‌ಇಆರ್‌

Published 17 ಜನವರಿ 2024, 16:36 IST
Last Updated 17 ಜನವರಿ 2024, 16:36 IST
ಅಕ್ಷರ ಗಾತ್ರ

ಬೆಂಗಳೂರು: ಶಿಕ್ಷಣ ಕಲಿಕೆಯ ಗುಣಮಟ್ಟವನ್ನು ಕರ್ನಾಟಕದಲ್ಲಿ ಗಣನೀಯವಾಗಿ ಸುಧಾರಿಸಬೇಕಿದೆ ಎನ್ನುವ ಅಂಶವನ್ನು ಶಿಕ್ಷಣ ಸ್ಥಿತಿಗತಿ ವಾರ್ಷಿಕ ವರದಿ–2023 (ಎಎಸ್‌ಇಆರ್‌) ಬಹಿರಂಗಗೊಳಿಸಿದೆ.

ಈ ಬಾರಿ ಸಮೀಕ್ಷೆಗಾಗಿ ಕರ್ನಾಟಕದ ಮೈಸೂರು ಜಿಲ್ಲೆಯನ್ನು ಆಯ್ಕೆ ಮಾಡಿಕೊಂಡಿದ್ದು, 60 ಹಳ್ಳಿಗಳಲ್ಲಿ 1,194 ಮನೆಗಳಿಗೆ ಭೇಟಿ ನೀಡಿ ವರದಿ ಸಿದ್ಧಪಡಿಸಲಾಗಿದೆ.

14ರಿಂದ 18 ವಯೋಮಾನದ ಶೇ 7.6ರಷ್ಟು ವಿದ್ಯಾರ್ಥಿಗಳು ಶಾಲೆ ಹಾಗೂ ಕಾಲೇಜು ತೊರೆದಿದ್ದಾರೆ. ಶೇ 68ರಷ್ಟು ಯುವಕರು ಕನಿಷ್ಠ 2 ಹಂತದ ಪಠ್ಯವನ್ನು ಓದುತ್ತಾರೆ. ಶೇ 58ರಷ್ಟು ಮಕ್ಕಳು ಮಾತ್ರ ಮೂಲ ಇಂಗ್ಲಿಷ್‌ ಓದಬಲ್ಲರು. 14-16 ವರ್ಷ ವಯಸ್ಸಿನ ಶೇ 2ರಷ್ಟು ಮಕ್ಕಳು ಯಾವುದೇ ಶಿಕ್ಷಣ ಸಂಸ್ಥೆಗಳಲ್ಲಿ ದಾಖಲಾಗಿಲ್ಲ. 14–16 ವಯಸ್ಸಿನ ಶೇ 19ರಷ್ಟು, ಶೇ 71ರಷ್ಟು ವಿದ್ಯಾರ್ಥಿಗಳು ಸರ್ಕಾರಿ ಸಂಸ್ಥೆಗಳಲ್ಲಿ ಶಾಲೆಯಲ್ಲಿ ದಾಖಲಾಗಿದ್ದಾರೆ. 5ರಿಂದ 8ನೇ ತರಗತಿಗಳ ವಿದ್ಯಾರ್ಥಿಗಳ ಕಲಿಕೆಯ ಮಟ್ಟ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಸ್ಥಿರವಾಗಿದೆ ಎಂಬ ಅಂಶಗಳನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಡಿಜಿಟಲ್‌ ತಂತ್ರಜ್ಞಾನ ಬಳಕೆಯಲ್ಲಿ ಕರ್ನಾಟಕದ ಜನರು ಮುಂದಿದ್ದಾರೆ. ಶೇ 88.6 ಮನೆಗಳಲ್ಲಿ ಮೊಬೈಲ್‌ ಫೋನ್‌ಗಳನ್ನು ಬಳಸುತ್ತಿದ್ದಾರೆ. ಶೇ 81ರಷ್ಟು ಜನರು ಮಾಹಿತಿಗಾಗಿ ಅಂತರ್ಜಾಲ ತಾಣ ಹುಡುಕಾಟ ನಡೆಸುತ್ತಿದ್ದಾರೆ. ಶೇ 93ರಷ್ಟು ಜನರಿಗೆ ಸಾಮಾಜಿಕ ಮಾಧ್ಯಮಗಳ ಬಳಕೆಯ ಅರಿವು ಇದೆ ಎಂದು ವಿವರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT