ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವ್ಯರ್ಥವಾದ 89,119 ಟನ್‌ ವಿದೇಶಿ ಮರಳು: ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ

ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ
Published 12 ಡಿಸೆಂಬರ್ 2023, 20:09 IST
Last Updated 12 ಡಿಸೆಂಬರ್ 2023, 20:09 IST
ಅಕ್ಷರ ಗಾತ್ರ

ವಿಧಾನ ಪರಿಷತ್‌: ವಿದೇಶದಿಂದ ಐದು ವರ್ಷಗಳ ಹಿಂದೆ ಆಮದು ಮಾಡಿಕೊಂಡಿದ್ದ 89,119 ಟನ್‌ನಷ್ಟು ಮರಳು ದಾಸ್ತಾನು ಇದ್ದು, ಮಾರಾಟ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಹೇಳಿದರು.

ಬಿಜೆಪಿಯ ಛಲವಾದಿ ನಾರಾಯಣಸ್ವಾಮಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು, 2017ರ ನಂತರ ಕರ್ನಾಟಕದಲ್ಲಿ ಮರಳಿನ ಸಮಸ್ಯೆ ಎದುರಾಗಿತ್ತು. ಜಾಗತಿಕ ಟೆಂಡರ್‌ ಮೂಲಕ ಎಂಎಸ್‌ಐಎಲ್‌ ಮೂಲಕ ವಿದೇಶದಿಂದ 1.03 ಲಕ್ಷ ಟನ್‌ ಮರಳು ತರಿಸಲಾಗಿತ್ತು. ಮರಳು ಮಾರಾಟದಿಂದ ಸಂಸ್ಥೆಗೆ ₹40 ಕೋಟಿ ಬಂದಿದೆ. ₹10.80 ಕೋಟಿ ಬಾಕಿ ಬರಬೇಕಿದೆ. ಮರಳು ಸರಬರಾಜು ಮಾಡಿದ ಗುತ್ತಿಗೆ ಕಂಪನಿಗೆ ₹14.81 ಕೋಟಿ ನೀಡಲಾಗಿದೆ. ಬಾಕಿ ಮರಳು ಮಾರಾಟದ ನಂತರ ಲಾಭ–ನಷ್ಟದ ಲೆಕ್ಕ ಸಿಗಲಿದೆ. ನಷ್ಟವಾಗಿರುವುದು ದೃಢಪಟ್ಟರೆ ಸಂಬಂಧಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.

ಸಹಕಾರ ಸಂಘ, ಬ್ಯಾಂಕ್‌ಗಳಿಗಿಲ್ಲ ಶಿಷ್ಟಾಚಾರ

ಸಹಕಾರ ಸಂಘ, ಬ್ಯಾಂಕ್‌ಗಳು ಜನಪ್ರತಿನಿಧಿಗಳನ್ನು ಕರೆಯಬೇಕು ಎಂಬ ಶಿಷ್ಟಾಚಾರ ಪಾಲಿಸಬೇಕಿಲ್ಲ ಎಂದು ಸಹಕಾರ ಸಚಿವ ಕೆ.ಎನ್‌.ರಾಜಣ್ಣ ಹೇಳಿದರು.

ಕಾಂಗ್ರೆಸ್‌ನ ಎನ್‌.ಮಂಜುನಾಥ ಭಂಡಾರಿ ಪ್ರಶ್ನೆಗೆ ಉತ್ತರಿಸಿದ ಅವರು,  2019ರಲ್ಲೇ ಈ ಕುರಿತು ಸರ್ಕಾರ ಸುತ್ತೋಲೆ ಹೊರಡಿಸಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT