‘ ಅಸ್ಸಾಂನಿಂದ ನನಗೆ ಮೂರು ಕರೆಗಳು ಬಂದವು. ಫೇಸ್ಬುಕ್ನಲ್ಲಿ ನನ್ನ ಫೊಟೊ ಬಳಸಿ, ಮಹಿಳೆಯ ಧ್ವನಿಯಲ್ಲಿ ನನ್ನಂತೆ ಮಾತನಾಡಿ, ಹಲವರಿಗೆ ವಂಚಿಸಿದ್ದಾರೆ. ಇದನ್ನು ಸೈಬರ್ ಕ್ರೈಂ ವಿಭಾಗದ ಗಮನಕ್ಕೆ ತಂದಿದ್ದೇನೆ. ಈ ರೀತಿಯ ವಂಚಕರಿಂದ ಸಾರ್ವಜನಿಕರು ಎಚ್ಚರವಾಗಿರಿ. ಇಂತಹವರಿಗೆ ಹಣ ನೀಡಬೇಡಿ’ ಎಂದು ರೂಪಾ ಅವರು ಟ್ವೀಟ್ ಮಾಡಿದ್ದಾರೆ.