ಬೆಂಗಳೂರು: ಮಹಾರಾಷ್ಟ್ರ ಚುನಾವಣಾ ಫಲಿತಾಂಶದ ಬಳಿಕ ‘ಇಂಡಿಯಾ’ ಮೈತ್ರಿಕೂಟ ನಾವಿಕನಿಲ್ಲದ ಹಡಗಿನಂತಾಗಿದೆ. ಇಂಡಿಯಾ ಒಕ್ಕೂಟದ ಸೋಲು ಈಗ ಅನಾಥವಾಗಿದೆ ಎಂದು ರಾಜ್ಯ ಬಿಜೆಪಿ ಟೀಕಿಸಿದೆ.

ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ, ‘ಮೈತ್ರಿಕೂಟವನ್ನು ಮುನ್ನಡೆಸುವಲ್ಲಿ ಕಾಂಗ್ರೆಸ್ ತೋರಿದ್ದ ಉತ್ಸಾಹ, ಸೋಲನ್ನು ಒಪ್ಪಿಕೊಳ್ಳುವುದರಲ್ಲಿ ಇಲ್ಲದ ಕಾರಣ ಮೈತ್ರಿಕೂಟದ ಸಾರಥಿಯ ಹುಡುಕಾಟಕ್ಕೆ ಅದರ ನಾಯಕರು ಮುಂದಾಗಿದ್ದಾರೆ’ ಎಂದು ಲೇವಡಿ ಮಾಡಿದೆ.

ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಮತ್ತು ಬಾಲಕ ಬುದ್ಧಿಯ ರಾಹುಲ್ ಗಾಂಧಿ ಅವರ ನಾಯಕತ್ವಕ್ಕೆ ‘ಇಂಡಿಯಾ’ ಬಣದ ಇತರ ನಾಯಕರು ಅಸಮಾಧಾನ ವ್ಯಕ್ತಪಡಿಸುವ ಮೂಲಕ ಕಾಂಗ್ರೆಸ್ ನೇತೃತ್ವವನ್ನು ಧಿಕ್ಕರಿಸಿದ್ದಾರೆ. ಕಾಂಗ್ರೆಸ್ ನಾಯಕತ್ವ ಕಾರಣಕ್ಕೆ ವಿಪಕ್ಷಗಳು ಈಗ ಕವಲು ದಾರಿಯಲ್ಲಿವೆ ಎಂದು ಬಿಜೆಪಿ ಹೇಳಿದೆ.

ಜನರ ತೀರ್ಪುಗಳನ್ನು ಸ್ವೀಕರಿಸಲಾರದಷ್ಟು ‘ಇಂಡಿಯಾ‘ ಮೈತ್ರಿಕೂಟದ ನಾಯಕರು ಹತಾಶಗೊಂಡಿದ್ದಾರೆ. ಸೋಲನ್ನು ಸ್ವೀಕರಿಸುವ ಗುಣವೂ ಇಲ್ಲದಷ್ಟು ದುರ್ಬಲರಾಗಿದ್ದಾರೆ. ಮೈತ್ರಿಕೂಟದ ನಾಯಕತ್ವ ಬದಲಾದರೂ ಹಣೆಬರಹವನ್ನು ಬದಲಿಸಲಾಗದು. ದೇಶ ವಿರೋಧಿ ಚಿಂತನೆಯವರನ್ನು ದೇಶದ ಜನತೆ ಎಂದಿಗೂ ಬೆಂಬಲಿಸಲಾರರು ಎಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.