ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಡುಬಿದಿರೆ 15ರಿಂದ ಆಳ್ವಾಸ್ ವಿಜ್ಞಾನ ಸಿರಿ

Last Updated 11 ನವೆಂಬರ್ 2018, 17:18 IST
ಅಕ್ಷರ ಗಾತ್ರ

ಮೂಡುಬಿದಿರೆ: ಆಳ್ವಾಸ್ ನುಡಿಸಿರಿ 2018ರ ಅಂಗವಾಗಿ ವಿದ್ಯಾಗಿರಿಯಲ್ಲಿ ಇದೇ 15ರಿಂದ 18ರವರೆಗೆ ಆಳ್ವಾಸ್ ವಿಜ್ಞಾನಸಿರಿ ನಡೆಯಲಿದ್ದು, ನಟಿ ವಿನಯಾ ಪ್ರಸಾದ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

ದೇಶದ ಹೆಸರಾಂತ ವಿಜ್ಞಾನ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳ ವಿವಿಧ ಕಲಿಕಾ ಮಾದರಿಗಳು ವಿಜ್ಞಾನಸಿರಿಯಲ್ಲಿ ಅನಾವರಣಗೊಳ್ಳುತ್ತವೆ. ಪ್ರತಿಭಾನ್ವಿತ ಸಂಶೋಧನಾ ಪ್ರವೃತ್ತಿಯುಳ್ಳ ವಿದ್ಯಾರ್ಥಿಗಳಿಗೆ ತಮ್ಮ ಸಂಶೋಧನಾ ಪ್ರಾವಿಣ್ಯತೆಯನ್ನು ಪ್ರದರ್ಶನಕ್ಕಿಟ್ಟು ವಿಶಿಷ್ಟ ಪ್ರಶಸ್ತಿ ಗೆಲ್ಲುವ ಅಪರೂಪದ ಅವಕಾಶ ವಿಜ್ಞಾನ ಸಿರಿಯಲ್ಲಿದೆ.

ಆಳ್ವಾಸ್ ಶೋಭಾವನದ ಅಪರೂಪದ ಔಷಧೀಯ ಸಸ್ಯಗಳ ವೀಕ್ಷಣೆ,ಕಲಿಕೆಗೆ ಮುಕ್ತ ಅವಕಾಶವಿದೆ.

ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಉಚಿತ ಪ್ರವೇಶವಿದ್ದು, ಮತ್ತು ನುರಿತ ವಿಜ್ಞಾನಿಗಳೊಂದಿಗೆ ಸಂವಾದ ನಡೆಸುವ ಅಪರೂಪದ ಅವಕಾಶವಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT