ಬೆಂಗಳೂರು:ಶಾಸಕ ಸ್ಥಾನದಿಂದ ಅನರ್ಹಗೊಂಡಿರುವ ಕಾಂಗ್ರೆಸ್, ಜೆಡಿಎಸ್‌ನ 17 ಕ್ಷೇತ್ರಗಳಲ್ಲೂ ಪಕ್ಷ ಬಲಪಡಿಸುವ ಪ್ರಯತ್ನಕ್ಕೆ ಕಾಂಗ್ರೆಸ್ ಕೈಹಾಕಿದ್ದು, ಪ್ರತಿ ಕ್ಷೇತ್ರಕ್ಕೂ ಹಿರಿಯ ಮುಖಂಡರ ನೇತೃತ್ವದಲ್ಲಿ ತಂಡ ರಚಿಸಿದೆ.

ರಾಜರಾಜೇಶ್ವರಿ ನಗರ ಕ್ಷೇತ್ರಕ್ಕೆಡಿ.ಕೆ.ಸುರೇಶ್, ಕೆ.ಆರ್.ಪುರಂಕ್ಕೆ ಜಾರ್ಜ್, ಯಶವಂತಪುರಕ್ಕೆ ಜಮೀರ್ ಅಹ್ಮದ್, ಎಂ.ಕೃಷ್ಣಪ್ಪ, ಹೊಸಕೋಟೆಗೆಕೃಷ್ಣಭೈರೇಗೌಡ, ಉಗ್ರಪ್ಪ, ಮಹಾಲಕ್ಷ್ಮಿ ಲೇಔಟ್‌ಗೆಮಾಗಡಿ ಬಾಲಕೃಷ್ಣ, ನಜೀರ್ ಅಹ್ಮದ್, ಕೆ.ಆರ್.ಪೇಟೆಗೆ ಚೆಲುವರಾಯ ಸ್ವಾಮಿ, ಗೋಕಾಕ್ ಕ್ಷೇತ್ರಕ್ಕೆ ಶಿವಾನಂದ ಪಾಟೀಲ್, ಹುಣಸೂರಿಗೆಎಚ್.ಸಿ.ಮಹದೇವಪ್ಪ, ರಾಣೆಬೆನ್ನೂರು ಕ್ಷೇತ್ರಕ್ಕೆಎಚ್.ಎಂ.ರೇವಣ್ಣ, ಹಾವೇರಿಗೆ ಎಚ್.ಕೆ.ಪಾಟೀಲ್, ಅಥಣಿ ಕ್ಷೇತ್ರಕ್ಕೆ ಈಶ್ವರ್ ಖಂಡ್ರೆ ಅವರು ವೀಕ್ಷಕರನ್ನಾಗಿ ಕಾಂಗ್ರೆಸ್ ನೇಮಿಸಿದೆ.

ಈ ತಂಡ ಭೇಟಿ ನೀಡಿ, ಪಕ್ಷ ಬಲಪಡಿಸುವ ಕುರಿತು ಕ್ಷೇತ್ರದ ಮುಖಂಡರು, ಕಾರ್ಯಕರ್ತರ ಜತೆಗೆ ಚರ್ಚೆ ನಡೆಸಲಿದೆ. ನಂತರ ಏನೆಲ್ಲ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಲಿದೆ. ಈ ವರದಿ ಆಧರಿಸಿ ಪಕ್ಷಕ್ಕೆ ಶಕ್ತಿ ತುಂಬಲು ನಾಯಕರುಮುಂದಾಗಿದ್ದಾರೆ.

ಅನರ್ಹರಿಗೆ ಕೋರ್ಟ್ ತಡೆಯಾಜ್ಞೆ ನೀಡುವ ಸಾಧ್ಯತೆಗಳು ಕಡಿಮೆ ಇರುವುದರಿಂದ ಉಪಚುನಾವಣೆಗೆ ಸಜ್ಜಾಗುವುದು, ಎಲ್ಲ 17 ಕ್ಷೇತ್ರಗಳನ್ನು ಕೇಂದ್ರೀಕರಿಸಿ ಕಾರ್ಯಕರ್ತರನ್ನು ಸಜ್ಜುಗೊಳಿಸುವ ಬಗ್ಗೆಗಂಟೆ ಹಿರಿಯ ಮುಖಂಡರು ಸುದೀರ್ಘ ಚರ್ಚೆ ನಡೆಸಿ ಈ ನಿರ್ಧಾರ ಕೈಗೊಂಡಿದ್ದಾರೆ.

ಜೆಡಿಎಸ್‌ನಿಂದ ಆಯ್ಕೆಯಾಗಿ ಆ ಪಕ್ಷ ತೊರೆದವರ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಬಲಪಡಿಸುವ ಕೆಲಸ ಆಗಬೇಕು. ಆ ಮೂರು ಕ್ಷೇತ್ರಗಳಲ್ಲಿ ಹಿಂದೆ ಸ್ಪರ್ಧಿಸಿ ಪರಾಭವಗೊಂಡಿರುವವರನ್ನೇ ಮತ್ತೆ ನಿಲ್ಲಿಸಬೇಕೆ, ಇಲ್ಲವೆ ಪರ್ಯಾಯ ನಾಯಕರ ಅಗತ್ಯವಿದೆಯೆ ಎಂಬ ಬಗ್ಗೆ ಕ್ಷೇತ್ರಕ್ಕೆ ಭೇಟಿ ನೀಡುವ ತಂಡ ಅಧ್ಯಯನ ನಡೆಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.