ಬೆಂಗಳೂರು: ರಾಜ್ಯದಲ್ಲಿ ‘ಆಯುಷ್ಮಾನ್ ವಯೋ ವಂದನಾ’ ಯೋಜನೆ ಜಾರಿಯಾಗದಿದ್ದರೂ 70 ವರ್ಷ ಮೇಲ್ಪಟ್ಟವರಿಗೆ ಆರೋಗ್ಯ ವಿಮೆಯ ಕಾರ್ಡ್ಗಳನ್ನು ವಿತರಿಸಲಾಗುತ್ತಿದೆ. ಈಗಾಗಲೇ 1.71 ಲಕ್ಷಕ್ಕೂ ಅಧಿಕ ವೃದ್ಧರು ಈ ಕಾರ್ಡ್ ಪಡೆದಿದ್ದಾರೆ. ಆದರೆ, ಆಸ್ಪತ್ರೆಗಳಲ್ಲಿ ಈ ಯೋಜನೆಯಡಿ ಚಿಕಿತ್ಸೆ ಸಿಗದ ಪರಿಣಾಮ ಗೊಂದಲಕ್ಕೆ ಒಳಗಾಗಿದ್ದಾರೆ.

‘ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ’ಯನ್ನು (ಎಬಿ–ಪಿಎಂಜೆಎವೈ) ಕಳೆದ ವರ್ಷ ವಿಸ್ತರಿಸಿದ ಕೇಂದ್ರ ಸರ್ಕಾರ, 70 ವರ್ಷ ಮೇಲ್ಪಟ್ಟ ಎಲ್ಲರಿಗೂ ಅನ್ವಯವಾಗುವಂತೆ ಈ ಯೋಜನೆಯನ್ನು ಜಾರಿ ಮಾಡಿತ್ತು. ಯೋಜನೆಯಡಿ ನಿಗದಿತ ಅನುದಾನದ ಖಚಿತತೆ ಇಲ್ಲದ ಕಾರಣ ರಾಜ್ಯ ಸರ್ಕಾರ ಇನ್ನೂ ಈ ಯೋಜನೆಯನ್ನು ಅನುಷ್ಠಾನ ಮಾಡಿಲ್ಲ. ಆದರೆ, ಯೋಜನೆಯಡಿ ಕಾರ್ಡ್ ವಿತರಿಸುತ್ತಿರುವ ಕಾರಣ, ವೃದ್ಧರು ಉತ್ಸಾಹದಿಂದ ಈ ಕಾರ್ಡ್ ಪಡೆಯುತ್ತಿದ್ದಾರೆ. ₹5 ಲಕ್ಷದ ವರೆಗೆ ಆರೋಗ್ಯ ವಿಮೆ ಭರವಸೆ ಒದಗಿ ಸುವ ‘ಆಯುಷ್ಮಾನ್ ವಯೋ ವಂದನಾ’ ಕಾರ್ಡ್ ಹೊಂದಿದ್ದರೂ ಚಿಕಿತ್ಸಾ ಸೌಲಭ್ಯ ಪಡೆಯಲು ಸಾಧ್ಯವಾಗುತ್ತಿಲ್ಲ.

ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರವು (ಎನ್ಎಚ್ಎ) ಈ ಯೋಜನೆಯ ಅನುಷ್ಠಾನದ ಹೊಣೆ ಹೊತ್ತಿದೆ. ಎನ್ಎಚ್ಎ ಪೋರ್ಟಲ್ ಮೂಲಕವೇ 70 ವರ್ಷ ಮೇಲ್ಪಟ್ಟ ಎಲ್ಲರಿಗೂ ಕಾರ್ಡ್ ಪಡೆಯುವ ಅವಕಾಶ ನೀಡಲಾಗಿದೆ. ವಿವಿಧ ಸಂಘ–ಸಂಸ್ಥೆಗಳು ಸಹ ಕಾರ್ಡ್ ವಿತರಣೆಗೆ ಸಂಬಂಧಿಸಿದಂತೆ ಅಭಿಯಾನ ನಡೆಸಿ, ಕಾರ್ಡ್ಗೆ ನೋಂದಣಿ ಮಾಡಿಸುತ್ತಿವೆ. ಯೋಜನೆ ಜಾರಿಯಾಗದ ಪರಿಣಾಮ ಈ ಕಾರ್ಡ್ಗಳು ನಿರರ್ಥಕವಾಗುತ್ತಿವೆ.

ನಿವಾರಣೆಯಾಗದ ಗೊಂದಲ: ‘ಆಯುಷ್ಮಾನ್ ವಯೋ ವಂದನಾ’ ಯೋಜನೆಯಡಿ ಚಿಕಿತ್ಸೆಗೆ 70 ವರ್ಷ ಮೇಲ್ಪಟ್ಟವರು ಪಡಿತರ ಚೀಟಿ ನೀಡಬೇಕಾದ ಅಗತ್ಯ ಇರುವುದಿಲ್ಲ. ಇದರಿಂದಾಗಿ ಯೋಜನೆ ಜಾರಿಯಾದಲ್ಲಿ ಎಲ್ಲ ವೃದ್ಧರೂ ₹5 ಲಕ್ಷದವರಿಗೆ ಉಚಿತ ಚಿಕಿತ್ಸೆ ಪಡೆಯಲು ಸಾಧ್ಯ. ಯೋಜನೆಗೆ ಅಗತ್ಯವಿರುವ ಅನುದಾನದ ಬಗೆಗಿನ ಗೊಂದಲ ನಿವಾರಿಸುವಂತೆ ರಾಜ್ಯ ಆರೋಗ್ಯ ಇಲಾಖೆಯು ಕೇಂದ್ರ ಆರೋಗ್ಯ ಸಚಿವಾಲಯಕ್ಕೂ ಪತ್ರ ಬರೆದಿದೆ. ಆದರೆ, ಅನುದಾನದ ಭರವಸೆ ಸಿಗದಿದ್ದರಿಂದ ಯೋಜನೆ ಜಾರಿ ಮಾಡಿಲ್ಲ.

‘ಈ ಯೋಜನೆಗೆ ಕೇಂದ್ರ ಸರ್ಕಾರ ಶೇ 60ರಷ್ಟು ಹಾಗೂ ರಾಜ್ಯ ಸರ್ಕಾರ ಶೇ 40ರಷ್ಟು ವೆಚ್ಚ ಭರಿಸಬೇಕಾಗುತ್ತದೆ. ರಾಜ್ಯದಲ್ಲಿ ಯೋಜನೆ ಅನುಷ್ಠಾನಕ್ಕೆ ₹68.98 ಕೋಟಿ ಅನುದಾನ ಅಗತ್ಯವಿದೆ. ಇದರಲ್ಲಿ ಶೇ 60ರಷ್ಟನ್ನು ಕೇಂದ್ರ ಸರ್ಕಾರ ನೀಡಬೇಕಾಗಿದೆ. ₹36.58 ಕೋಟಿ ಅನುದಾನ ಪಡೆಯಲು ರಾಜ್ಯ ಅರ್ಹವಾಗಿದೆ. ಅನುದಾನದ ಸಮಸ್ಯೆಯಿಂದ ಯೋಜನೆ ಜಾರಿಯಾಗಿಲ್ಲ. ಯೋಜನೆಯಡಿ ಈಗಲೇ ಕಾರ್ಡ್ ಪಡೆಯಬೇಕಾದ ಅಗತ್ಯವಿಲ್ಲ’ ಎಂದು ಆರೋಗ್ಯ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದರು.

ಆಯುಷ್ಮಾನ್ ವಯೋ ವಂದನಾ ಯೋಜನೆ ಜಾರಿಗೆ ಪ್ರಯತ್ನಿಸಲಾಗುತ್ತಿದೆ. ಆದರೆ ಕೇಂದ್ರ ಸರ್ಕಾರದಿಂದ ಸಮರ್ಪಕ ಉತ್ತರ ಹಾಗೂ ಅನುದಾನದ ಭರವಸೆ ಸಿಗುತ್ತಿಲ್ಲ
ದಿನೇಶ್ ಗುಂಡೂರಾವ್ ಆರೋಗ್ಯ ಸಚಿವ

ಪಡಿತರ ಚೀಟಿ ಇದ್ದಲ್ಲಿ ಚಿಕಿತ್ಸೆ

ರಾಜ್ಯದಲ್ಲಿ ಸದ್ಯ ಎಬಿ–ಪಿಎಂಜೆಎವೈ–ಆರೋಗ್ಯ ಕರ್ನಾಟಕ ಯೋಜನೆ ಜಾರಿಯಲ್ಲಿದೆ. ಈ ಯೋಜನೆಯಡಿ ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬದ 70 ವರ್ಷ ಮೇಲ್ಪಟ್ಟವರು ಸೇರಿ ಎಲ್ಲ ವಯೋಮಾನದವರಿಗೆ ₹5 ಲಕ್ಷದವರೆಗೆ ಉಚಿತ ಚಿಕಿತ್ಸೆ ಒದಗಿಸಲಾಗುತ್ತಿದೆ. ಎಪಿಎಲ್ ಕಾರ್ಡ್ ಹೊಂದಿರುವ ಕುಟುಂಬದ ಸದಸ್ಯರಿಗೆ ಯೋಜನೆಯಡಿ ಚಿಕಿತ್ಸಾ ವೆಚ್ಚದ ಶೇ 30ರಷ್ಟು ಪಾವತಿಸಲಾಗುತ್ತಿದೆ. ಪಡಿತರ ಚೀಟಿ ಹಾಗೂ ಆಧಾರ್ ಕಾರ್ಡ್ ನೀಡಬೇಕಿದೆ. ಈ ಯೋಜನೆಯನ್ನು ರಾಜ್ಯದಲ್ಲಿ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ (ಸಾಸ್ಟ್) ನಿರ್ವಹಿಸುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.