ಬೆಂಗಳೂರು:ಅಲಯನ್ಸ್ ವಿಶ್ವವಿದ್ಯಾಲಯದ ವಿಶ್ರಾಂತ ಸಹ ಕುಲಪತಿ ಅಯ್ಯಪ್ಪ ದೊರೆ (52) ಹತ್ಯೆ ಪ್ರಕರಣ ಸಂಬಂಧ ಮತ್ತೆ ಮೂವರನ್ನು ಆರ್.ಟಿ.ನಗರ ಪೊಲೀಸರು ಬಂಧಿಸಿದ್ದಾರೆ.

‘ಜೆ.ಸಿ.ನಗರದ ಮಂಜುನಾಥ್ ಅಲಿಯಾಸ್ ಬಂಡೆ ಮಂಜ (26), ಮುನಿರೆಡ್ಡಿಪಾಳ್ಯದ ಶ್ರೀನಿವಾಸ್ ಅಲಿಯಾಸ್ ಶೀನಪ್ಪ (18) ಹಾಗೂ ಆನೇಕಲ್ನ ಮಹೇಂದ್ರ (31) ಬಂಧಿತರು. ಇವರೆಲ್ಲ ಪ್ರಕರಣದ ಪ್ರಮುಖ ಆರೋಪಿ ಸೂರಜ್ ಸಿಂಗ್ನ ಸ್ನೇಹಿತರು’ ಎಂದು ಪೊಲೀಸರು ಹೇಳಿದರು.

‘ಹತ್ಯೆ ಮಾಡಲು ₹1 ಕೋಟಿ ಸುಪಾರಿ ನೀಡಿದ್ದ ವಿಶ್ವವಿದ್ಯಾಲಯದ ಕುಲಪತಿ ಸುಧೀರ್ ಅಂಗೂರ್ ಹಾಗೂ ಸಹಚರರ ಕಟ್ಟಿಕೊಂಡು ಕೃತ್ಯ ಎಸಗಿದ್ದ ಸೂರಜ್ನನ್ನು ಹತ್ಯೆ ನಡೆದ 24 ಗಂಟೆಯಲ್ಲೇ ಬಂಧಿಸಲಾಗಿದೆ. ಈಗ ಮತ್ತೆ ಮೂವರನ್ನು ಸೆರೆ ಹಿಡಿಯುವ ಮೂಲಕ ಬಂಧಿತರ ಸಂಖ್ಯೆ 13ಕ್ಕೇರಿದೆ’ ಎಂದು ವಿವರಿಸಿದರು.

ಆರ್.ಟಿ.ನಗರದ ಎಚ್.ಎಂ.ಟಿ ಮೈದಾನ ಬಳಿ ಇದೇ 15ರಂದು ಅಯ್ಯಪ್ಪ ಅವರನ್ನು ಹತ್ಯೆ ಮಾಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.