ಬಿಜೆಪಿಯವರ ಪ್ರವೃತ್ತಿ ಹೀಗೆ ಮುಂದುವರಿದರೆ ರಾಜ್ಯದಲ್ಲಿ ಅವರ ಒಂದು ಸಭೆಗೂ ಅವಕಾಶ ನೀಡಲ್ಲ. ಇದು ಕಾಂಗ್ರೆಸ್ ಪ್ರತಿಜ್ಞೆ. ಬಿಜೆಪಿ ನಾಯಕರೇ, ನಿಮ್ಮ ಕಾರ್ಯಕರ್ತರಿಗೆ ಬುದ್ದಿ ಹೇಳಿ. ಇದು ಎಚ್ಚರಿಕೆ.
ಡಿ.ಕೆ.ಶಿವಕುಮಾರ್, ಉಪಮುಖ್ಯಮಂತ್ರಿ
ಒಬ್ಬ ಮುಖ್ಯಮಂತ್ರಿ ಪೊಲೀಸ್ ಅಧಿಕಾರಿಯನ್ನು ಇಷ್ಟು ಕೀಳಾಗಿ ನಡೆಸಿಕೊಳ್ತಾರಾ? ಅಧಿಕಾರಿಗಳು ಸರ್ಕಾರದ ಕೈಬೊಂಬೆನಾ? ಸಿದ್ದರಾಮಯ್ಯರ ದುರಹಂಕಾರ ಅಂದ್ರೆ ಇದೇನೇ..
ಆರ್.ಅಶೋಕ, ವಿರೋಧಪಕ್ಷದ ನಾಯಕ
ಒಬ್ಬ ದಕ್ಷ ಪೊಲೀಸ್ ಅಧಿಕಾರಿಯನ್ನು ವೇದಿಕೆ ಮೇಲೆ ಕರೆದು ಕಪಾಳಮೋಕ್ಷ ಮಾಡಲು ಮುಂದಾಗಿದ್ದು ಮುಖ್ಯಮಂತ್ರಿಗೆ ಶೋಭೆ ತರುವುದಿಲ್ಲ. ಸಿದ್ದರಾಮಯ್ಯ ಮನಸ್ಸು ವಿಚಲಿತವಾಗಿದೆ..