ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

Bengaluru Kambala | ಮಲೆಕುಡಿಯ ಜನಾಂಗದ ಕೋಣ ಜೋಡಿ ಭಾಗಿ

Published 26 ನವೆಂಬರ್ 2023, 0:30 IST
Last Updated 26 ನವೆಂಬರ್ 2023, 0:30 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಕಂಬಳದಲ್ಲಿ ದಕ್ಷಿಣ ಕನ್ನಡದ ಕಾಂಡಂಚಿನ ನಿವಾಸಿಗಳಾದ ಮಲೆಕುಡಿಯ ಜನಾಂಗ ಹಾಗೂ ಬ್ಯಾರಿ ಸಮುದಾಯದವರ ಕೋಣಗಳು ಶನಿವಾರ ಗಮನಸೆಳೆದವು.  ಅಂದಾಜು 15-17 ಸಾವಿರಷ್ಟು ಜನಸಂಖ್ಯೆ ಇರುವ ಮಲೆಕುಡಿಯ ಜನಾಂಗದ ಏಕೈಕ ಕೋಣಗಳ ಜೋಡಿ ‘ಗುಂಡ’ ಹಾಗೂ ‘ದಾಸ’ ಭಾಗವಹಿಸಿವೆ.

ಕೋಣಗಳ ಜತೆ ಅದರ ನಿಯಂತ್ರಣ, ಆರೈಕೆಗೆ ಸುಮಾರು 20 ಮಂದಿ ಆಗಮಿಸಿದ್ದಾರೆ.

ವಕೀಲ ದಿನೇಶ್‌ ಹೆಗ್ಡೆ ಉಳೆಪಾಡಿ ಅವರು ಈ ಕೋಣಗಳ ಪ್ರಾಯೋಜಕತ್ವ ವಹಿಸಿದ್ದು, ಮಲೆಕುಡಿಯರ ಹೆಸರಿನಲ್ಲೇ ಕೋಣಗಳು ಓಡುತ್ತಿರುವುದು ಇದೇ ಮೊದಲ ಬಾರಿ. ಇದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಡಿಡುಪೆ ಗ್ರಾಮದ ಕಾಡಂಚಿನ ಪ್ರದೇಶ ಬಿಳಿಯೂರು ಎಂಬಲ್ಲಿನ ನಾರಾಯಣ ಮಲೆಕುಡಿಯ ಈ ಕೋಣದ ಮಾಲೀಕರು.

ಈ ಹಿಂದೆ ಹಲವು ಕಂಬಳಗಲ್ಲಿ ಭಾಗವಹಿಸಿದ ಅನುಭವ ಈ ಕೋಣಗಳಿಗೆ ಇವೆ. ಆರ್ಥಿಕವಾಗಿ ಹಿಂದುಳಿದವರಾಗಿದ್ದರಿಂದ ಊರಿನ ಸಮೀಪ ನಡೆಯುತ್ತಿದ್ದ ಕಂಬಳಕ್ಕೆ ಮಾತ್ರ ಕೋಣಗಳನ್ನು ಕರೆದುಕೊಂಡು ಹೋಗಲಾಗುತ್ತಿತ್ತು. ನೇಗಿಲು ಹಿರಿಯ ವಿಭಾಗದಲ್ಲಿ ಇಲ್ಲಿನ ಕಂಬಳದಲ್ಲಿ ಸ್ಪರ್ಧೆ ಮಾಡುತ್ತಿವೆ. ಇವರ ತಂಡದಲ್ಲಿ ಮಲೆಕುಡಿಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದು, ಬೇರೆ ಸಮುದಾಯದವರೂ ಕೂಡ ಇದ್ದಾರೆ.

‘ಕೆಲ ದಿನಗಳ ಹಿಂದೆ ಪ್ರವಾಸಕ್ಕೆಂದು ದಿಡುಪೆಗೆ ಹೋಗಿದ್ದಾಗ ಈ ಕೋಣಗಳನ್ನು ನೋಡಿದ್ದೆ. ಕಂಬಳದಲ್ಲಿ ಭಾಗಿಯಾಗಲು ಯಜಮಾನರಿಗೆ ಆರ್ಥಿಕ ಸಮಸ್ಯೆ ಇರುವುದನ್ನು ಮನಗಂಡು ನಾನೇ ಪ್ರಾಯೋಜಕತ್ವ ವಹಿಸಿಕೊಂಡೆ’ ಎನ್ನುತ್ತಾರೆ ದಿನೇಶ್ ಹೆಗ್ಡೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT