ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌: ಬೈಸಿಕಲ್‌ನಲ್ಲಿ ಕಚೇರಿಗೆ ತೆರಳಿದ ಡಿಸಿ, ಎಸ್ಪಿ

Published 4 ಡಿಸೆಂಬರ್ 2023, 7:58 IST
Last Updated 4 ಡಿಸೆಂಬರ್ 2023, 7:58 IST
ಅಕ್ಷರ ಗಾತ್ರ

ಬೀದರ್‌: ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್‌.ಎಲ್‌. ಅವರು ನಗರದಲ್ಲಿ ಸೋಮವಾರ ಅವರ ಕಚೇರಿಗಳಿಗೆ ಬೈಸಿಕಲ್‌ ಮೇಲೆ ತೆರಳಿ ಗಮನ ಸೆಳೆದರು.

ನಗರದ ಬಹಮನಿ ಕೋಟೆ ಸಮೀಪದ ಮನೆಯಿಂದ ಡಿಸಿ, ಎಸ್ಪಿ ಇಬ್ಬರು ಒಟ್ಟಿಗೆ ಬೈಸಿಕಲ್‌ ತುಳಿಯುತ್ತ, ಪರಸ್ಪರ ಮಾತನಾಡುತ್ತ ಕಚೇರಿಗಳಿಗೆ ಹೋದರು. ಡಿಸಿ, ಎಸ್ಪಿ ಇಬ್ಬರು ಬೈಸಿಕಲ್‌ ಮೇಲೆ ಹೋಗುತ್ತಿರುವುದನ್ನು ನೋಡಿ ಜನ ಹುಬ್ಬೇರಿಸಿದರು. ಕೆಲವರು ಅವರಿಗೆ ನಗುಮುಖದಿಂದ ನಮಸ್ಕಾರ ಸರ್‌ ಎಂದು ಹೇಳಿದರು. 

ಗೋವಿಂದ ರೆಡ್ಡಿ ಮಾತನಾಡಿ, ಬೈಸಿಕಲ್‌ ಉಪಯೋಗದಿಂದ ಆಗುವ ಪ್ರಯೋಜನಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ನಾನು ಹಾಗೂ ಎಸ್ಪಿಯವರು ಇಂದು ಬೈಸಿಕಲ್‌ನಲ್ಲಿ ಕಚೇರಿಗೆ ಹೊರಟಿದ್ದೇವೆ. ಪಾಲಕರು 18 ವರ್ಷದೊಳಗಿನ ತಮ್ಮ ಮಕ್ಕಳಿಗೆ ಬೈಕ್‌ ಬದಲು ಬೈಸಿಕಲ್‌ ಕೊಡಿಸಬೇಕು. ಇದರಿಂದ ಆರೋಗ್ಯವೂ ಉತ್ತಮವಾಗುತ್ತದೆ. ಅಪ್ರಾಪ್ತರು ಮೋಟಾರ್‌ ಸೈಕಲ್‌ ಓಡಿಸುತ್ತಿರುವುದರಿಂದ ಅಪಘಾತಗಳು ಹೆಚ್ಚಾಗಿ ಸಂಭವಿಸುತ್ತಿವೆ ಎಂದರು.

ಚನ್ನಬಸವಣ್ಣ ಎಸ್‌.ಎಲ್‌. ಮಾತನಾಡಿ, ಅಪ್ರಾಪ್ತ ವಯಸ್ಸಿನವರು ಮೋಟಾರ್‌ ಸೈಕಲ್‌ ಬಳಸಲು ಕಾನೂನಿನಲ್ಲಿ ಅವಕಾಶ ಇಲ್ಲ. ಒಂದು ವೇಳೆ ಬೈಕ್‌ ಬಳಸಿ ಸಿಕ್ಕಿಬಿದ್ದರೆ ಭಾರಿ ದಂಡ ಕಟ್ಟಬೇಕಾಗುತ್ತದೆ. ಅಪಘಾತ ಸಂಭವಿಸಿದರೆ ದೊಡ್ಡ ಸಮಸ್ಯೆ ಎದುರಿಸಬೇಕಾಗುತ್ತದೆ. ಶಾಲಾ, ಕಾಲೇಜುಗಳಿಗೆ ಹೋಗುವವರು ಬೈಸಿಕಲ್‌ಗಳನ್ನು ಉಪಯೋಗಿಸಬೇಕು. ಪಾಲಕರು ಕೂಡ ಮಕ್ಕಳಿಗೆ ಬೈಸಿಕಲ್‌ಗಳನ್ನೇ ಕೊಡಿಸಬೇಕು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT