‘ಅಕ್ರಮವಾದರೂ ಮುಸ್ಲಿಂ ಪರ ನಿಲುವು’
‘ನಿಯಮ ಬದ್ಧವಾಗಿ ಮನೆ ಕಟ್ಟಿಕೊಂಡವರಿಗೆ ನಿತ್ಯವೂ ಕಿರುಕುಳ ನೀಡುವ ಕಾಂಗ್ರೆಸ್ ಸರ್ಕಾರ ಕೋಗಿಲು ಬಡಾವಣೆಯಲ್ಲಿ ಅಕ್ರಮವಾಗಿ ಮನೆ ಕಟ್ಟಿಕೊಂಡಿದ್ದರೂ ಮುಸ್ಲಿಮರ ಪರವಾಗಿ ಮಾತನಾಡುತ್ತಿರುವುದು ಖಂಡನೀಯ’ ಎಂದು ಬಿಜೆಪಿ ಶಾಸಕ ಡಾ.ಸಿ.ಎನ್.ಅಶ್ವತ್ಥನಾರಾಯಣ ಟೀಕಿಸಿದರು. ‘ಮುಸ್ಲಿಮರ ಚಾಂಪಿಯನ್ ಆಗಬೇಕು ಎಂಬ ಕಾರಣಕ್ಕೆ ಕಾಂಗ್ರೆಸ್ ನಾಯಕರು ಸ್ಪರ್ಧೆಗೆ ಇಳಿದಿದ್ದಾರೆ. ಅಲ್ಲಿ ಮನೆ ಕಟ್ಟಿಕೊಂಡ ಮುಸ್ಲಿಮರು ಯಾವ ದೇಶದಿಂದ ಬಂದವರು ಎಂದು ಪ್ರಶ್ನಿಸಿದ್ದಾರಾ? ಅವರಿಗೆ ವಸತಿ ಕೊಡುವುದಾಗಿ ವಸತಿ ಸಚಿವರು ಹೇಳಿಕೆ ನೀಡಿದ್ದಾರೆ. ಎಲ್ಲದಕ್ಕೂ ಮಾತನಾಡುವ ಸಚಿವ ಕೃಷ್ಣಬೈರೇಗೌಡ ಅವರು ಎಲ್ಲಿ ನಾಪತ್ತೆ ಆಗಿದ್ದಾರೆ? ಅವರ ಸದ್ದು ಕೇಳುತ್ತಾ ಇಲ್ಲ. ಅವರ ಧ್ವನಿ ಉಡುಗಿ ಹೋಗಿದೆಯಾ’ ಎಂದು ಪ್ರಶ್ನಿಸಿದರು.