ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಕ್ತ ಸಂಗ್ರಹ, ವಿತರಣಾ ವಾಹನ’ಗಳಿಗೆ ಚಾಲನೆ

ವಾಹನದ ವಿನ್ಯಾಸ ಬದಲಾವಣೆಗೆ ಆರೋಗ್ಯ ಸಚಿವ ಸೂಚನೆ l ಎನ್‌ಎಚ್‌ಎಂ ಯೋಜನೆಯಡಿ ವಾಹನ ಖರೀದಿ
Last Updated 22 ಜುಲೈ 2019, 19:36 IST
ಅಕ್ಷರ ಗಾತ್ರ

ಬೆಂಗಳೂರು:ರಾಜ್ಯದ ರಕ್ತ ನಿಧಿಗಳಲ್ಲಿ ರಕ್ತ ಸಂಗ್ರಹ ಮತ್ತು ವಿತರಣೆ ಪ್ರಮಾಣ ಹೆಚ್ಚಿಸುವ ಉದ್ದೇಶದಿಂದ'ರಕ್ತ ಸಂಗ್ರಹ ಮತ್ತು ವಿತರಣಾ ವಾಹನ’ಗಳಿಗೆ ಆರೋಗ್ಯ ಸಚಿವ ಶಿವಾನಂದ ಪಾಟೀಲ ಸೋಮವಾರ ಚಾಲನೆ ನೀಡಿದರು.

‘ರಕ್ತ ಸಂಗ್ರಹ ಮತ್ತು ವಿತರಣೆಯಲ್ಲಿ ಈ ವಾಹನಗಳು ಮಹತ್ವದ ಪಾತ್ರ ನಿರ್ವಹಿಸಲಿವೆ. ಆದರೆ, ಇವುಗಳ ವಿನ್ಯಾಸ ಅಷ್ಟೊಂದು ಸಮಂಜಸವಾಗಿಲ್ಲ’ಎಂದು ಸಚಿವರು ಸುದ್ದಿಗಾರರಿಗೆ ತಿಳಿಸಿದರು.

‘ಒಂದು ಬಾರಿಗೆ ಇಬ್ಬರಿಗಿಂತ ಹೆಚ್ಚು ಜನ ರಕ್ತದಾನ ಮಾಡುವ ನಿಟ್ಟಿನಲ್ಲಿ ಹಾಸಿಗೆಯ ಸಂಖ್ಯೆ ಹೆಚ್ಚಿಸಬೇಕು’ ಎಂದು ಅಧಿಕಾರಿಗಳಿಗೆ ಸಲಹೆ ನೀಡಿದ ಅವರು, ‘ಸದ್ಯ ಐದು ವಾಹನಗಳು ಕಾರ್ಯಾರಂಭಿಸಲಿವೆ. ಈ ವಾಹನಗಳ ಸಂಖ್ಯೆ ಹೆಚ್ಚಿಸುವ ಅಗತ್ಯವಿದೆ’ ಎಂದರು.

ರಾಷ್ಟ್ರೀಯ ಆರೋಗ್ಯ ಅಭಿಯಾನ ಯೋಜನೆಯಡಿ (ಎನ್‌ಎಚ್‌ಎಂ) ಆರೋಗ್ಯ ಇಲಾಖೆಯು ಈ ವಾಹನಗಳನ್ನು ಖರೀದಿಸಿದೆ.

5 ಜಿಲ್ಲೆಗಳಲ್ಲಿ ಕಾರ್ಯ: ಸದ್ಯ ಈ ವಾಹನಗಳು ದಾವಣಗೆರೆ, ತುಮಕೂರು, ಶಿವಮೊಗ್ಗ, ವಿಜಯಪುರ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸಲಿವೆ.

ವಾಹನದಲ್ಲಿ ಏನೇನಿದೆ ?

ರಕ್ತದಾನ ಮಾಡಲು ಮತ್ತು ವಿಶ್ರಾಂತಿಗಾಗಿ ಎರಡು ಹಾಸಿಗೆ. ರೆಫ್ರಿಜರೇಟರ್‌, ಕವರ್‌ ಸೀಲ್‌ ಯಂತ್ರ, ರಕ್ತ ಪರೀಕ್ಷೆ ಕಿಟ್‌, ವೈದ್ಯಕೀಯ ಉಪಕರಣ, ಜನರೇಟರ್‌ ಮತ್ತು ಹವಾನಿಯಂತ್ರಿತ ವ್ಯವಸ್ಥೆ

ಸಿಬ್ಬಂದಿ ಎಷ್ಟು ?

ಒಂದು ವಾಹನದಲ್ಲಿವೈದ್ಯ, ಸಲಹೆಗಾರ, ಇಬ್ಬರು ಶುಶ್ರೂಷಕರು, ಇಬ್ಬರು ಡಿ ದರ್ಜೆಯ ಸಿಬ್ಬಂದಿ ಹಾಗೂ ಚಾಲಕ ಇರುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT