ಕಲಬುರ್ಗಿ: ರಾಜ್ಯದಲ್ಲಿ ಅನಗತ್ಯ ಇಲಾಖೆಗಳನ್ನು ರದ್ದು ಮಾಡುವ ಅಥವಾ ಪ್ರಮುಖ ಇಲಾಖೆಗಳಲ್ಲಿ ವಿಲೀನ ಮಾಡುವ ಮೂಲಕ ಅಲ್ಲಿರುವ ಸಿಬ್ಬಂದಿಯನ್ನು ಅಗತ್ಯವಿರುವಲ್ಲಿ ಬಳಸಿಕೊಳ್ಳಲು ತೀರ್ಮಾನಿಸಲಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ‌್ ಪ್ರಕಟಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ 100ಕ್ಕೂ ಹೆಚ್ಚು ಸಿಬ್ಬಂದಿ ಇದ್ದಾರೆ. ಅವರಿಗೆ ಹೆಚ್ಚು ಕೆಲಸವೇ ಇಲ್ಲ. ಅವರನ್ನು ಖಾಲಿ ಹುದ್ದೆಗಳಿಗೆ ನಿಯೋಜಿಸಲಾಗುವುದು. ಪ್ರಸ್ತುತ ಒಟ್ಟು ಆದಾಯದ ಶೇ 60ರಷ್ಟನ್ನು ಸಿಬ್ಬಂದಿ ವೇತನಕ್ಕೇ ಖರ್ಚು ಮಾಡಲಾಗುತ್ತಿದೆ. ಇಷ್ಟೊಂದು ಹಣ ಖರ್ಚು ಮಾಡುವ ಬದಲು ಅಭಿವೃದ್ಧಿ ಕಾರ್ಯಗಳಿಗೆ ಬಳಸಿಕೊಳ್ಳಲಾಗುವುದು ಎಂದು ಹೇಳಿದರು.

ಹೊಸ ತಾಲ್ಲೂಕುಗಳ ನೂತನ ಮಿನಿ ವಿಧಾನಸೌಧ ನಿರ್ಮಾಣಕ್ಕೆ ಹಂತ ಹಂತವಾಗಿ ಅನುದಾನ ಬಿಡುಗಡೆ ಮಾಡಲಾಗುವುದು ಎಂದರು.

ವೃದ್ಧಾಪ್ಯ ವೇತನವನ್ನು ಮನೆ ಬಾಗಿಲಿಗೇ ತಲುಪಿಸಲು ತೀರ್ಮಾನಿಸಲಾಗಿದೆ. 60 ವರ್ಷ ಆದ ಅರ್ಹರು ತಮ್ಮ ಬ್ಯಾಂಕ್ ಖಾತೆ ನೀಡಿದರೆ ಅವರ ಖಾತೆಗೇ ವೃದ್ಧಾಪ್ಯ ವೇತನ ಜಮಾ ಮಾಡಲಾಗುವುದು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.