ಗುರುವಾರ, 28 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಹ್ಯಾಕಾಶ ಸಂಶೋಧನೆಗೆ ಅನುದಾನ ಕಡಿತಗೊಳಿಸಿ ದ್ರೋಹ ಎಸಗಿದ ಮೋದಿ: ಕಾಂಗ್ರೆಸ್ ಟೀಕೆ

Published 26 ಆಗಸ್ಟ್ 2023, 13:30 IST
Last Updated 26 ಆಗಸ್ಟ್ 2023, 13:30 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಬಾಹ್ಯಾಕಾಶ ಸಂಶೋಧನೆಗೆ ಅನುದಾನ ಕಡಿತಗೊಳಿಸುವ ಮೂಲಕ ದ್ರೋಹ ಎಸಗಿದ್ದಾರೆ ಎಂದು ಕಾಂಗ್ರೆಸ್ ಟೀಕಿಸಿದೆ.

ಅನುದಾನ ಕಡಿತಗೊಳಿಸಿರುವ ವಿಚಾರವಾಗಿ ‘ಪ್ರಜಾವಾಣಿಯ ವಿಶೇಷ ವರದಿ’ಯನ್ನು ಸಾಮಾಜಿಕ ಮಾಧ್ಯಮ ‘ಎಕ್ಸ್‌’ನಲ್ಲಿ ಹಂಚಿಕೊಂಡಿರುವ ಕಾಂಗ್ರೆಸ್, ‘ಚಂದ್ರಯಾನದ ಯಶಸ್ಸಿನ ಶ್ರೇಯ ವಿಜ್ಞಾನಿಗಳಿಗೆ ಸಲ್ಲಬೇಕು, ಆದರೆ, ಯಶಸ್ಸಿನ ಕೀರ್ತಿಯನ್ನು ತನ್ನತ್ತ ಕೇಂದ್ರೀಕರಿಸಲು ರೋಡ್ ಶೋಕಿ ಮಾಡುವವರು ಬಾಹ್ಯಾಕಾಶ ಸಂಶೋಧನೆಗೆ ಅನುದಾನ ಕಡಿತಗೊಳಿಸಿ ದ್ರೋಹ ಎಸಗಿದ್ದಾರೆ.

‘ಬಜೆಟ್‌ನಲ್ಲಿ ಘೋಷಿಸಿದ ಅನುದಾನದಲ್ಲೇ ಕಡಿತ. ಘೋಷಣೆಯಾದ ಅನುದಾನ ಬಿಡುಗಡೆ ಮಾಡುವುದರಲ್ಲೂ ಇನ್ನಷ್ಟು ಕಡಿತ. ಇಷ್ಟೆಲ್ಲಾ ದ್ರೋಹವೆಸಗಿ ಖಾಲಿ ಕೈ ಬೀಸುವುದನ್ನು ಅವರ ಸಾಧನೆ ಎನ್ನಬೇಕೇ’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಚಂದ್ರಯಾನ–3ರ ಯಶಸ್ಸಿಗೆ ಇಸ್ರೊ ವಿಜ್ಞಾನಿಗಳನ್ನು ಅಭಿನಂದಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿಗೆ ಬಂದಿದ್ದರು. ಇದೇ ವೇಳೆ ರೋಡ್‌ ಶೋ ಕೂಡ ನಡೆಸಿದ್ದರು. ‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT