ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಮ್ ಆದ್ಮಿ ಪಕ್ಷ ಸೇರಿದ ಹಾಸ್ಯ ನಟ ಟೆನ್ನಿಸ್‌ ಕೃಷ್ಣ

Last Updated 4 ಆಗಸ್ಟ್ 2022, 9:51 IST
ಅಕ್ಷರ ಗಾತ್ರ

ಬೆಂಗಳೂರು: ಚಂದನವನದ ಹಾಸ್ಯ ನಟಟಿನ್ನಿಸ್ ಕೃಷ್ಣ ಅವರುಗುರುವಾರ ಅಧಿಕೃತವಾಗಿಆಮ್ ಆದ್ಮಿ ಪಕ್ಷಕ್ಕೆ (ಎಎಪಿ) ಸೇರ್ಪಡೆಯಾಗಿದ್ದಾರೆ.

ಪಂಜಾಬ್‌ ಮತ್ತು ದೆಹಲಿಯಲ್ಲಿ ಸರ್ಕಾರ ರಚನೆ ಮಾಡಿರುವ ಎಎಪಿಗೆ ಅವರನ್ನು ಪಕ್ಷದರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಬರಮಾಡಿಕೊಂಡರು.

ಪಕ್ಷಕ್ಕೆ ಸೆರ್ಪಡೆಯಾದ ಬಳಿಕಟೆನ್ನಿಸ್‌ ಕೃಷ್ಣ ಮಾತನಾಡಿ ‘ಅಧಿಕಾರಕ್ಕಾಗಿ ಪಕ್ಷಕ್ಕೆ ಸೇರಿಲ್ಲ. ಜನಸೇವೆಗಾಗಿ ಸೇರಿದ್ದೇನೆ’ ಎಂದು ಹೇಳಿದರು. ಈ ಹಿಂದೆ ಮತ್ತೊಬ್ಬ ಹಾಸ್ಯನಟ ಮುಖ್ಯಮಂತ್ರಿ ಚಂದ್ರು ಕೂಡ ಎಎಪಿ ಸೇರಿದ್ದಾರೆ.

ಇಲ್ಲಿನ ಖಾಸಗಿ ಹೊಟೇಲ್‌ನಲ್ಲಿ ನಡೆದ ಸರಳ ಸಮಾರಂಭದಲ್ಲಿ ಪೃಥ್ವಿ ರೆಡ್ಡಿ ಸೇರಿದಂತೆ ಪಕ್ಷದ ಅನೇಕ ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT