ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳ್ಳಿ ಬಟ್ಟಲು: ಪುಟ್ಟಣ್ಣ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು

Published 12 ಫೆಬ್ರುವರಿ 2024, 16:23 IST
Last Updated 12 ಫೆಬ್ರುವರಿ 2024, 16:23 IST
ಅಕ್ಷರ ಗಾತ್ರ

ಬೆಂಗಳೂರು: ಶಿಕ್ಷಕರ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ ಅವರು ಶಾಲಾ ಶಿಕ್ಷಕರಿಗೆ ಬೆಳ್ಳಿ ಬಟ್ಟಲು ನೀಡುವ ಮೂಲಕ ಆಮಿಷ ಒಡ್ಡುತ್ತಿದ್ದಾರೆ ಎಂದು ಆರೋಪಿಸಿ ಜೆಡಿಎಸ್‌ ವಕ್ತಾರ ಪ್ರದೀಪ್‌ ಕುಮಾರ್‌ ಸೋಮವಾರ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.

ಪುಟ್ಟಣ್ಣ ಅವರ ಕಾರ್ಯಕರ್ತರು ಹೊಸಕೋಟೆ, ವಿಜಯನಗರ, ಚನ್ನಪಟ್ಟಣ, ಕನಕಪುರ, ಗೋವಿಂದರಾಜ ನಗರ ಕ್ಷೇತ್ರಗಳಲ್ಲಿ ಬೆಳ್ಳಿಯ ಬಟ್ಟಲುಗಳನ್ನು ಹಂಚಿದ್ದಾರೆ. ಇದು ಚುನಾವಣೆಯ ಮಾದರಿ ನೀತಿ ಸಂಹಿತೆಯ ಉಲ್ಲಂಘನೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಬೆಳ್ಳಿ ಬಟ್ಟಲು ಇರುವ  ಬಾಕ್ಸ್, ಕವರ್‌ ಮೇಲೆ ಪುಟ್ಟಣ್ಣ ಅವರ ಹೆಸರು ಇಂಗ್ಲಿಷ್‌ ಹಾಗೂ ಕನ್ನಡದಲ್ಲಿ ನಮೂದಿಸಿದ್ದಾರೆ. ಅವುಗಳನ್ನು ಮಹಿಳಾ ಕಾರ್ಯಕರ್ತೆಯೊಬ್ಬರು ಶಿಕ್ಷಕರಿಗೆ ವಿತರಿಸುತ್ತಿರುವ ಚಿತ್ರಗಳನ್ನೂ ಜೆಡಿಎಸ್‌ ಪಕ್ಷ ಮಾಧ್ಯಮಗಳಿಗೆ ಬಿಡುಗಡೆ ಮಾಡಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT