ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡದಿಂದ ಜೋಶಿ ಬದಲು ಶ್ರೀಕಾಂತಗೆ ಟಿಕೆಟ್ ಕೊಡಲಿ: ಬಿಜೆಪಿಗೆ ಕಾಂಗ್ರೆಸ್ ಸವಾಲು

Published 4 ಜನವರಿ 2024, 7:13 IST
Last Updated 4 ಜನವರಿ 2024, 7:13 IST
ಅಕ್ಷರ ಗಾತ್ರ

ಬೆಂಗಳೂರು: ಮುಂದಿನ ಲೋಕಸಭೆ ಚುನಾವಣೆಯಲ್ಲಿ ಧಾರವಾಡ ಕ್ಷೇತ್ರದಿಂದ ಪ್ರಲ್ಹಾದ ಜೋಶಿ ಬದಲು ಹಿಂದೂ ಕಾರ್ಯಕರ್ತ ಶ್ರೀಕಾಂತ ಪೂಜಾರಿಗೆ ಟಿಕೆಟ್ ನೀಡಿ ಎಂದು ಬಿಜೆಪಿಗೆ ರಾಜ್ಯ ಕಾಂಗ್ರೆಸ್‌ ಸವಾಲೆಸೆದಿದೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಕಾಂಗ್ರೆಸ್‌, ‘ಶ್ರೀಕಾಂತ ಮೇಲೆ ಬಿಜೆಪಿಗೆ ಕಾಳಜಿ, ಪ್ರೀತಿ ಇದ್ದರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಧಾರವಾಡ ಕ್ಷೇತ್ರಕ್ಕೆ ಪ್ರಲ್ಹಾದ ಜೋಶಿ ಬದಲು ಶ್ರೀಕಾಂತ್ ಪೂಜಾರಿಗೆ ಟಿಕೆಟ್ ನೀಡಲಿ. ಹೊಸ ಪ್ರತಿಭೆಯನ್ನು ಪರಿಚಯಿಸಲಿ’ ಎಂದು ಹೇಳಿದೆ.

‘ಕಳ್ಳಭಟ್ಟಿ, ಮಟ್ಕಾ ದಂಧೆಕೋರ ಶ್ರೀಕಾಂತ ಪೂಜಾರಿ 16 ಪ್ರಕರಣದಲ್ಲಿ ಭಾಗಿಯಾಗುವ ಮೂಲಕ ಬಿಜೆಪಿ ಅಭ್ಯರ್ಥಿಯಾಗುವ ಮಾನದಂಡಗಳನ್ನು ಪೂರೈಸಿ ಅರ್ಹತೆ ಪಡೆದಿದ್ದಾನೆ’ ಎಂದು ಕಾಂಗ್ರೆಸ್ ಬರೆದುಕೊಂಡಿದೆ.

‘ಕ್ರಿಮಿನಲ್‌ಗಳಿಗೆ, ಕಳ್ಳರಿಗೆ, ಅತ್ಯಾಚಾರಿಗಳಿಗೆ, ರೌಡಿಗಳಿಗೆ ಬಿಜೆಪಿಯಲ್ಲಿ ಮನ್ನಣೆ ಎನ್ನುವುದು ಚಿತ್ತಾಪುರ ಕ್ಷೇತ್ರದಲ್ಲಿ ತೋರಿಸಿಕೊಟ್ಟಿದೆ. ಮೋದಿ ರೌಡಿ ಶೀಟರ್‌ಗೆ ಕೈ ಮುಗಿದು ನಿಲ್ಲುವ ಮೂಲಕ ಸಮಾಜಘಾತುಕ ಶಕ್ತಿಗಳೇ ಬಿಜೆಪಿಯ ಶಕ್ತಿ ಎಂಬುದು ನಿರೂಪಿತವಾಗಿದೆ’ ಎಂದು ಕಾಂಗ್ರೆಸ್‌ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT