ಗುರುವಾರ, 30 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಮುಖ ಎನ್ನುವುದು ಈಗ ಚಲಾವಣೆಗೆ ಸಾಧ್ಯವಿಲ್ಲದ ಸವಕಲು ನಾಣ್ಯ: ಕಾಂಗ್ರೆಸ್‌

Published 10 ಅಕ್ಟೋಬರ್ 2023, 8:18 IST
Last Updated 10 ಅಕ್ಟೋಬರ್ 2023, 8:18 IST
ಅಕ್ಷರ ಗಾತ್ರ

ಬೆಂಗಳೂರು: ಮೋದಿ ಮುಖ ಎನ್ನುವುದು ಈಗ ಚಲಾವಣೆಗೆ ಸಾಧ್ಯವಿಲ್ಲದ ಸವಕಲು ನಾಣ್ಯ ಎಂದು ಕಾಂಗ್ರೆಸ್‌ ಕುಹಕವಾಡಿದೆ.

ಪಕ್ಷದಲ್ಲಿ ಯಡಿಯೂರಪ್ಪನವರನ್ನು ಮೂಲೆಗುಂಪು ಮಾಡಲಾಗುತ್ತಿದೆ ಎಂದು ರೇಣುಕಾಚಾರ್ಯ ಹೇಳಿರುವ ಮಾಧ್ಯಮಗಳಿಗೆ ಹೇಳಿರುವ ಮಾತುಗಳನ್ನು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿರುವ ಕಾಂಗ್ರೆಸ್, ಯಡಿಯೂರಪ್ಪನವರನ್ನು ಮೂಲೆಗುಂಪು ಮಾಡುವ ಮುಖ್ಯ ಸೂತ್ರದಾರರು ಮೋದಿ, ಶಾ ಜೋಡಿಯೇ ಎನ್ನುವುದು ರೇಣುಕಾಚಾರ್ಯರಿಂದ ಬಯಲಾಗಿದೆ ಎಂದು ಬರೆದುಕೊಂಡಿದೆ.

[object Object]

‘ಚುನಾವಣೆಯ ಸಮಯದಲ್ಲಿ ಮೋದಿ ತಿಂಗಳುಗಟ್ಟಲೆ ಕರ್ನಾಟಕದಲ್ಲಿ ಠಿಕಾಣಿ ಹೂಡಿದ್ದರೂ, ಹತ್ತಾರು ಕಿಲೋಮೀಟರ್ ರೋಡ್ ಶೋಕಿ ಮಾಡಿದರೂ ಮೋದಿ ಮುಖಕ್ಕೆ ಕನ್ನಡಿಗರು ಕಿಂಚಿತ್ ಬೆಲೆ ಕೊಡಲಿಲ್ಲ. ಮೋದಿ ಮುಖ ಎಂಬುದು ಈಗ ಚಲಾವಣೆಗೆ ಸಾಧ್ಯವಿಲ್ಲದ ಸವಕಲು ನಾಣ್ಯದಂತಾಗಿದೆ ಎಂಬ ಸತ್ಯ ಬಿಜೆಪಿಗರಿಗೆ ಅರ್ಥವಾದಂತಿದೆ ಎಂದು ಹೇಳಿದೆ.

ಯಡಿಯೂರಪ್ಪನವರನ್ನು ಮೂಲೆಗುಂಪು ಮಾಡುವ ಮುಖ್ಯ ಸೂತ್ರದಾರರು ಮೋದಿ, ಶಾ ಜೋಡಿಯೇ ಎನ್ನುವುದು ರೇಣುಕಾಚಾರ್ಯರಿಂದ ಬಯಲಾಗಿದೆ ಎಂದು ಕಾಂಗ್ರೆಸ್‌ ಹೇಳಿದೆ.

ಬಿ.ಎಸ್‌ ಯಡಿಯೂರಪ್ಪ ವಿರುದ್ಧ ಸಂತೋಷ ಕೂಟಕ್ಕೆ ಬಲ ಕೊಡಲೆಂದೇ ನಳಿನ್ ಕುಮಾರ್ ರನ್ನು ಅಧ್ಯಕ್ಷರಾನ್ನಾಗಿ ಮಾಡಲಾಯ್ತೆ ಎಂದು ಬಿಜೆಪಿ ರಾಜ್ಯ ಘಟಕವನ್ನು ಟ್ಯಾಗ್‌ ಮಾಡಿ ಪ್ರಶ್ನೆ ಮಾಡಿರುವ ಕಾಂಗ್ರೆಸ್‌, ನಳಿನ್‌ ಕುಮಾರ್‌ ಕಟೀಲ್‌ ಅವರೇ,ನೀವು ಯಾರ ರಬ್ಬರ್ ಸ್ಟಾಂಪ್? ರಾಜ್ಯ ಬಿಜೆಪಿಯ ಹಿಡನ್ ಅಧ್ಯಕ್ಷ ಯಾರು? ರಾಜ್ಯಾಧ್ಯಕ್ಷ ಹುದ್ದೆ ಕೇವಲ ಕುರ್ಚಿ ತುಂಬಲು ಇರುವ ಹುದ್ದೆ ಮಾತ್ರವೇ ಎಂದು ಪ್ರಶ್ನಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT