ಗದಗ: ‘ಮುಂದಿನ ಚುನಾವಣೆ ವೇಳೆ ಕಾಂಗ್ರೆಸ್ ಇನ್ನೂ ದುರ್ಬಲ ಆಗಲಿದ್ದು, ಹೀನಾಯ ಸ್ಥಿತಿ ತಲುಪಲಿದೆ. ಕಾಂಗ್ರೆಸ್‌ನಲ್ಲಿ ಒಳಜಗಳ, ಕಚ್ಚಾಟಗಳು ಜಾಸ್ತಿಯಾಗಿದ್ದು, ಪಕ್ಷ ಈಗ ಮೂರು ಗುಂಪಾಗಿದೆ’ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.

ನಗರದಲ್ಲಿನಡೆದಜನಸೇವಕ್‌ಸಮಾವೇಶದಲ್ಲಿಅವರುಮಾತನಾಡಿ,‘ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ, ಪರಮೇಶ್ವರ್ ಇವರೆಲ್ಲರೂ ನಾನೇ ಮುಖ್ಯಮಂತ್ರಿ ಎಂದು ಹೇಳಿಕೊಂಡು ಗುದ್ದಾಡಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಸಮರ್ಥವಾಗಿ ಮುನ್ನಡೆಸುವವರು ಯಾರೂ ಇಲ್ಲ. ಅದಕ್ಕೆ ಈ ದೇಶದಲ್ಲಿ ಕಾಂಗ್ರೆಸ್ ಉಳಿಯಲಿಕ್ಕೆ ಸಾಧ್ಯ ಇಲ್ಲ. ಆ ಭಾಗ್ಯ ಈ ಭಾಗ್ಯ ಕೊಟ್ಟಿದ್ದೆ ಎಂದು ಹೇಳಿಕೊಳ್ಳುವವರ ಹಣೆಬರಹವೇ ದೌರ್ಭಾಗ್ಯವಾಯಿತು’ ಎಂದು ಹೇಳಿದರು.

‘ಕಾಂಗ್ರೆಸ್ ವಾರಸುದಾರರು ಇಲ್ಲದ ಮನೆಯಾಗಿದೆ. ದೇಶದಲ್ಲಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಲು ಒಬ್ಬ ಯೋಗ್ಯ ವ್ಯಕ್ತಿ ಇಲ್ಲದಂತಾಗಿದೆ. ರಾಹುಲ್ ಗಾಂಧಿ ಅವರು ಕುಣಿಕೆ ಬಿಚ್ಚಿ ಬಿಟ್ಟಂತಹ ದನ ಇದ್ದಂತೆ. ಅವರು ಇಷ್ಟ ಬಂದ ಕಡೆ ಹೋಗುತ್ತಾರ, ಬರುತ್ತಾರೆ. ಅವರನ್ನು ಹುಡುಕಲಿಕ್ಕೆ, ಹಿಡಿಯಲಿಕ್ಕೆ ಯಾರಿಗೂ ಸಾಧ್ಯವಿಲ್ಲ. ಅವರೊಬ್ಬ ಜವಾಬ್ದಾರಿ ಇಲ್ಲದ ಮನುಷ್ಯ’ ಎಂದು ಲೇವಡಿ ಮಾಡಿದರು.

‘ಮುಂದಿನ ಹತ್ತು ವರ್ಷಗಳ ಕಾಲ ದೇಶದಲ್ಲಿ ನರೇಂದ್ರ ಮೋದಿ ಅವರ ಸರ್ಕಾರವೇ ಇರಲಿದೆ. ಅವರ ನಾಯಕತ್ವದಲ್ಲಿ ದೇಶದ ಆಡಳಿತ ಮುನ್ನಡೆಯಲಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.