ಮಂಗಳವಾರ, 4 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Covid-19 Karnataka Update: 4 ಸಾವಿರ ದಾಟಿದ ಕೋವಿಡ್, 54 ಮಂದಿ ಸಾವು

Last Updated 3 ಜೂನ್ 2020, 20:46 IST
ಅಕ್ಷರ ಗಾತ್ರ
ADVERTISEMENT
""

ಬೆಂಗಳೂರು: ಕಲಬುರ್ಗಿಯಲ್ಲಿ 105 ಸೇರಿದಂತೆ ರಾಜ್ಯದಲ್ಲಿ ಬುಧವಾರ ಒಂದೇ ದಿನ 268 ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಸಂಖ್ಯೆ 4,064ಕ್ಕೆ ಏರಿಕೆಯಾಗಿದೆ.

ಕೇವಲ 48 ಗಂಟೆಗಳಲ್ಲಿ 656 ಮಂದಿಗೆ ಕೊರೊನಾ ಸೋಂಕು ತಗುಲಿದೆ. ಒಂದು ವಾರದಲ್ಲಿ 1,646 ಪ್ರಕರಣಗಳು ವರದಿಯಾಗಿವೆ. ಬುಧವಾರ ಹೊಸದಾಗಿ ವರದಿಯಾದ ಪ್ರಕರಣಗಳಲ್ಲಿ 250 ಮಂದಿ ಅನ್ಯರಾಜ್ಯಗಳಿಂದ ಬಂದವರಾಗಿದ್ದಾರೆ. ರಾಜ್ಯದಲ್ಲಿ ಈವರೆಗೆ ವರದಿಯಾದ ಒಟ್ಟು ಪ್ರಕರಣಗಳಲ್ಲಿ 2,163 ಮಂದಿ ಮಹಾರಾಷ್ಟ್ರದ ನಂಟನ್ನು ಹೊಂದಿದ್ದಾರೆ.

ಕಲಬುರ್ಗಿಯಲ್ಲಿ 105, ಉಡುಪಿಯಲ್ಲಿ 62, ರಾಯಚೂರಿನಲ್ಲಿ 35, ಬೆಂಗಳೂರಿನಲ್ಲಿ 21, ಮಂಡ್ಯದಲ್ಲಿ 13, ಯಾದಗಿರಿಯಲ್ಲಿ 9, ವಿಜಯಪುರದಲ್ಲಿ 6, ದಾವಣಗೆರೆಯಲ್ಲಿ 3, ದಕ್ಷಿಣ ಕನ್ನಡದಲ್ಲಿ 2, ಮೈಸೂರಿನಲ್ಲಿ 2, ಬಾಗಲಕೋಟೆಯಲ್ಲಿ 2, ಶಿವಮೊಗ್ಗದಲ್ಲಿ 2, ಕೋಲಾರದಲ್ಲಿ 2 ಹಾಗೂ ಹಾಸನ, ಬಳ್ಳಾರಿ, ಧಾರವಾಡ, ಬೆಂಗಳೂರು ಗ್ರಾಮಾಂತರದಲ್ಲಿ ತಲಾ ಒಂದು ಪ್ರಕರಣ ವರದಿಯಾಗಿದೆ. ಬುಧವಾರ ಒಂದೇ ದಿನ 15,197 ಮಂದಿಯ ಗಂಟಲ ದ್ರವದ ಮಾದರಿಯನ್ನು ಪರೀಕ್ಷೆ ಮಾಡಲಾಗಿದೆ. 111 ಮಂದಿ ಚೇತರಿಸಿಕೊಂಡು ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ.

ಕಲಬುರ್ಗಿಯಲ್ಲಿ ಎರಡು ದಿನಗಳಲ್ಲಿ 205 ಪ್ರಕರಣಗಳು ವರದಿಯಾಗಿದ್ದು, ಉಡುಪಿಯಲ್ಲಿ 48 ಗಂಟೆಗಳಲ್ಲಿ 212 ಮಂದಿಗೆ ಸೋಂಕು ತಗುಲಿದೆ.

ಮೃತರ ಸಂಖ್ಯೆ 54ಕ್ಕೆ ಏರಿಕೆ
ಸೋಂಕಿನಿಂದ ಸಾವಿಗೀಡಾದವರ ಸಂಖ್ಯೆ 54ಕ್ಕೆ ತಲುಪಿದೆ. ದಾವಣಗೆರೆಯ 80 ವರ್ಷದ ವೃದ್ಧೆ ಮೇ 29ರಂದು ಹಾಗೂ ಬೆಂಗಳೂರಿನಲ್ಲಿ 67 ವರ್ಷ ವೃದ್ಧರೊಬ್ಬರು ಜೂನ್‌1 ರಂದು ನಿಧನರಾಗಿದ್ದರು. ಕೋವಿಡ್ ಪರೀಕ್ಷೆಯ ವರದಿ ಬುಧವಾರ ದೊರಕಿದ್ದು, ಸೋಂಕು ತಗುಲಿತ್ತು ಎನ್ನುವುದು ದೃಢಪಟ್ಟಿದೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT