ಬೆಂಗಳೂರು: ಕೊರೊನಾವೈರಸ್ ಸೋಂಕು ವ್ಯಾಪಿಸಿರುವ ಪ್ರಮಾಣದ ಆಧಾರದಲ್ಲಿ ದೇಶದಾದ್ಯಂತವಿರುವ 733 ಜಿಲ್ಲೆ ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಕೆಂಪು, ಕಿತ್ತಳೆ, ಹಳದಿ, ಹಸಿರು ವಲಯಗಳಾಗಿ ಕೇಂದ್ರ ಸರ್ಕಾರ ವಿಂಗಡಿಸಿದೆ.

ಕೆಂಪು ವಲಯದಲ್ಲಿ ರಾಜ್ಯದಲ್ಲಿ 6 ಜಿಲ್ಲೆಗಳಿದ್ದರೆ, ಹಳದಿ ವಲಯದಲ್ಲಿ ನಾಲ್ಕು ಜಿಲ್ಲೆಗಳಿವೆ, ಕಿತ್ತಳೆ ಬಣ್ಣದ ವಲಯದಲ್ಲಿ 8 ಜಿಲ್ಲೆಗಳಿವೆ, ಹಸಿರುವ ವಲಯದಲ್ಲಿ 12 ಜಿಲ್ಲೆಗಳಿವೆ.

ಕೆಂಪು ವಲಯವಾಗಿ ಗುರುತಿಸಿರುವ ಜಿಲ್ಲೆಗಳಲ್ಲಿ ಲಾಕ್‍ಡೌನ್ ನಿರ್ಬಂಧ ಮುಂದುವರಿಯಲಿದ್ದು, ಮೇ 3ರನಂತರವೂ ಲಾಕ್‌ಡೌನ್ ತೆರವುಗೊಳಿಸಲಾಗುವುದಿಲ್ಲ.ಅದೇ ವೇಳೆ ಜಿಲ್ಲೆಯೊಳಗೆ ಮತ್ತು ಅಂತರ್ ಜಿಲ್ಲಾ ಸಂಚಾರಕ್ಕೂ ನಿರ್ಬಂಧ ವಿಧಿಸಿದೆ.

ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಪ್ರಧಾನ ಕಾರ್ಯದರ್ಶಿಗಳಿಗೆ ಕೇಂದ್ರ ಆರೋಗ್ಯ ಇಲಾಖೆಯ ಕಾರ್ಯದರ್ಶಿ ಪ್ರೀತಿ ಸುದಾನ್ ಪತ್ರ ಕಳಿಸಿದ್ದು, ಕೆಲವೊಂದು ಜಿಲ್ಲೆಗಳನ್ನು ಕೆಂಪು ವಲಯ ಮಾಡಬೇಕು ಎಂದು ಕೆಲವು ರಾಜ್ಯಗಳು ಬೇಡಿಕೆ ಮುಂದಿಟ್ಟಿವೆ.

ಪ್ರತಿಯೊಂದು ಜಿಲ್ಲೆಯನ್ನೂ ನಾಲ್ಕು ವಲಯಗಳಾಗಿ ವಿಂಗಡಿಸಿದ್ದು, ಇವು ಬೇರೆ ಬೇರೆ ರಾಜ್ಯಗಳಿಂದ ವ್ಯತ್ಯಸ್ತವಾಗಿರುತ್ತವೆ.ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ, ದ್ವಿಗುಣವಾಗುವ ಪ್ರಮಾಣ ಇವುಗಳನ್ನು ಆಧರಿಸಿ ಈ ರೀತಿ ವಲಯಗಳನ್ನಾಗಿ ವಿಂಗಡಿಸಲಾಗಿದೆ.

ಯಾವ ಜಿಲ್ಲೆಗಳು ಯಾವ ವಲಯ? ಇಲ್ಲಿದೆ ಪಟ್ಟಿ.

ಕೆಂಪು ವಲಯ

ಬೆಂಗಳೂರು ನಗರ
ಮೈಸೂರು
ಬೆಳಗಾವಿ
ವಿಜಯಪುರ
ಕಲಬುರಗಿ
ಬಾಗಲಕೋಟೆ

ಹಳದಿ ವಲಯ

ಉಡುಪಿ
ಉತ್ತರ ಕನ್ನಡ
ತುಮಕೂರು
ಗದಗ

ಕಿತ್ತಳೆ ವಲಯ

ಮಂಡ್ಯ
ಧಾರವಾಡ
ಬಳ್ಳಾರಿ
ಬೀದರ್
ದಕ್ಷಿಣ ಕನ್ನಡ
ಬೆಂಗಳೂರು ಗ್ರಾಮಾಂತರ
ಚಿಕ್ಕಬಳ್ಳಾಪುರ
ದಾವಣಗೆರೆ

ಹಸಿರು ವಲಯ

ಯಾದಗಿರಿ
ರಾಯಚೂರು
ಕೊಪ್ಪಳ
ಹಾವೇರಿ
ಚಿತ್ರದುರ್ಗ
ಶಿವಮೊಗ್ಗ
ಚಿಕ್ಕಮಗಳೂರು
ಹಾಸನ
ರಾಮನಗರ
ಕೊಡಗು
ಕೋಲಾರ
ಚಾಮರಾಜನಗರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.