ಭಾನುವಾರ, 25 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯಕ್ಕೆ 30,000 ಡೋಸ್‌ ಕೋರ್ಬಿವ್ಯಾಕ್ಸ್‌ ಲಸಿಕೆ

Published 2 ಜನವರಿ 2024, 0:07 IST
Last Updated 2 ಜನವರಿ 2024, 0:07 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಶೀಲ್ಡ್‌ ಅಥವಾ ಕೊವಾಕ್ಸಿನ್‌ 2ನೇ ಲಸಿಕೆ ಪಡೆದವರಿಗೆ ನೀಡಲು ಕೇಂದ್ರ ಸರ್ಕಾರವು ರಾಜ್ಯಕ್ಕೆ 30,000 ಡೋಸ್‌ ಕೋರ್ಬಿವ್ಯಾಕ್ಸ್‌ ಲಸಿಕೆಯನ್ನು ಸರಬರಾಜು ಮಾಡಿದೆ.

ಈ ಲಸಿಕೆಯನ್ನು ವಿಜಾತಿ (ಹೆಟೆರೊಲಾಗಸ್‌) ಮುನ್ನೆಚ್ಚರಿಕೆಯಾಗಿ ನೀಡಬಹುದು. ತಾಂತ್ರಿಕ ಸಲಹಾ ಸಮಿತಿಯ ಶಿಫಾರಸಿನಂತೆ ಕೋವಿಶೀಲ್ಡ್‌ ಅಥವಾ ಕೋವಾಕ್ಸಿನ್‌ ಲಸಿಕೆಯ 2ನೇ ಡೋಸ್ ಪಡೆದು ಆರು ತಿಂಗಳು ಅಥವಾ 26 ತಿಂಗಳು ಪೂರೈಸಿಯೂ ಮುನ್ನೆಚ್ಚರಿಕೆ ಡೋಸ್‌ ಪಡೆಯದವರಿಗೆ ನೀಡಬಹುದು. 60 ವರ್ಷ ದಾಟಿದವರು, ರೋಗ ನಿರೋಧಕ ಶಕ್ತಿ ಕಡಿಮೆ ಇರುವವರು ಪಡೆಯಬಹುದು. ಕೋವಿಡ್‌–19 ಲಸಿಕಾಕರಣದ ಮಾರ್ಗಸೂಚಿಯಂತೆ ನೀಡಲಾಗುವುದು.

ಜಿಲ್ಲಾ ಆಸ್ಪತ್ರೆಗಳು ಮತ್ತು ಜಿಲ್ಲಾ ಮಟ್ಟದಲ್ಲಿ ನಿರ್ಣಯಿಸಲಾದ ತಾಲ್ಲೂಕು ಆಸ್ಪತ್ರೆಗಳಿಗೆ ಮಾತ್ರ ಹಂಚಿಕೆ ಮಾಡಿ ಲಸಿಕಾಕರಣ ಹಮ್ಮಿಕೊಳ್ಳಲಾಗುವುದು ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಕೋರ್ಬಿವ್ಯಾಕ್ಸ್‌ ಡೋಸ್ ಹಂಚಿಕೆ

ಜಿಲ್ಲೆ;ಹಂಚಿಕೆ

ಬೆಂಗಳೂರು ನಗರ; 840

ಬೆಂಗಳೂರು ಗ್ರಾಮಾಂತರ; 480

ಬಿಬಿಎಂಪಿ; 5,680

ಚಿಕ್ಕಬಳ್ಳಾಪುರ; 520

ಕೋಲಾರ; 680

ರಾಮನಗರ; 440

ತುಮಕೂರು; 1,300

ಬೆಳಗಾವಿ; 2,280

ಧಾರವಾಡ; 920

ಹಾವೇರಿ; 780

ಉತ್ತರ ಕನ್ನಡ; 660

ಬಳ್ಳಾರಿ; 640

ಚಿತ್ರದುರ್ಗ;720

ದಾವಣಗೆರೆ; 740

ಶಿವಮೊಗ್ಗ; 820

ವಿಜಯನಗರ; 560

ಬಾಗಲಕೋಟೆ; 900

ವಿಜಯಪುರ; 1,000

ಗದಗ; 500

ಕೊಪ್ಪಳ; 520

ಚಾಮರಾಜನಗರ; 440

ಹಾಸನ; 720

ಕೊಡಗು; 220

ಮಂಡ್ಯ; 720

ಮೈಸೂರು; 1,360

ಚಿಕ್ಕಮಗಳೂರು; 480

ದಕ್ಷಿಣ ಕನ್ನಡ; 1,140

ಉಡುಪಿ; 520

ಬೀದರ್‌; 840

ಕಲಬುರಗಿ; 1,280

ರಾಯಚೂರು; 820

ಯಾದಗಿರಿ; 480

ಒಟ್ಟು; 30,000

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT