ಕಲಬುರಗಿ: ಕಲಬುರಗಿ, ಬೀದರ್ ಮತ್ತು ರಾಯಚೂರು ಜಿಲ್ಲೆಗಳ ವಿವಿಧ ಶಾಲೆಗಳ 67 ವಿದ್ಯಾರ್ಥಿಗಳಲ್ಲಿ ಕೋವಿಡ್ ದೃಢಪಟ್ಟಿದೆ.

ರಾಯಚೂರು ಜಿಲ್ಲೆಯಲಿಂಗಸುಗೂರು ತಾಲ್ಲೂಕಿನಕರಡಕಲ್ಲ ಪರಿಶಿಷ್ಟ ಪಂಗಡದ ಮೆಟ್ರಿಕ್ ನಂತರದ ವಸತಿ ನಿಲಯದ 14 ವಿದ್ಯಾರ್ಥಿಗಳಿಗೆ ಸೋಂಕು ತಗುಲಿದೆ.

ಮಾನ್ವಿ ಪಟ್ಟಣದ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯ 17, ಕವಿತಾಳದ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯ ಇಬ್ಬರು ವಿದ್ಯಾರ್ಥಿನಿಯರು ಹಾಗೂ
ಕಲಬುರಗಿ ಜಿಲ್ಲೆ ಅಫಜಲಪುರ ತಾಲ್ಲೂಕಿನಬಡದಾಳ ಶಾಲೆಯ 6, ಗೊಬ್ಬುರ ಶಾಲೆಯ 12, ದೇಸಾಯಿ ಕಲ್ಲೂರ ಶಾಲೆಯ 9 ಮಕ್ಕಳಿಗೆ ಕೋವಿಡ್ ದೃಢಪಟ್ಟಿದೆ.

ಬೀದರ್ ಜಿಲ್ಲೆಕಮಲನಗರ ತಾಲ್ಲೂಕಿನ ಠಾಣಾಕುಶನೂರು ಗ್ರಾಮದಲ್ಲಿ ಕರ್ನಾಟಕ ಪಬ್ಲಿಕ್ ಬಾಲಕರ ಶಾಲೆ, ಪದವಿಪೂರ್ವ ಕಾಲೇಜು, ಬಾಲಕಿಯರ ಪ್ರೌಢ ಶಾಲೆ ಒಂದೇ ಆವರಣದಲ್ಲಿದ್ದು, ಒಟ್ಟು 12 ಮಕ್ಕಳು ಹಾಗೂ 8ಜನ ಶಿಕ್ಷಕರಿಗೆ ಸೋಂಕು ತಗುಲಿದೆ. ಸೋಂಕಿತರಿಗೆ ಹೋಂ ಕ್ವಾರಂ
ಟೈನ್‌ನಲ್ಲಿ ಇರಲು ಸೂಚಿಸಲಾಗಿದೆ.

ಅಕ್ಕಮಹಾದೇವಿ ವಿವಿಗೆ ರಜೆ ಘೋಷಣೆ(ವಿಜಯಪುರ): ಇಲ್ಲಿನ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಅನೇಕ ವಿದ್ಯಾರ್ಥಿನಿ
ಯರಲ್ಲಿ ಸೋಂಕು ದೃಢಪಟ್ಟಿದ್ದು, ಜ. 21ರಿಂದ 27ರ ವರೆಗೆ ರಜೆ ಘೋಷಿಸಲಾಗಿದೆ ಎಂದು ವಿ.ವಿ. ಹೇಳಿಕೆ ತಿಳಿಸಿದೆ.

ಚನ್ನರಾಯಪಟ್ಟಣ ತಾಲ್ಲೂಕು ಶಾಲೆಗಳಿಗೆ ರಜೆ (ಹಾಸನ):ಸೋಂಕು ಏರಿಕೆ ಕಾರಣ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿ ಜ. 21ರಿಂದ 26ರವರೆಗೆ 1 ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ಜಿಲ್ಲಾಧಿಕಾರಿ ಆರ್.ಗಿರೀಶ್ ರಜೆ ಘೋಷಿಸಿದ್ದಾರೆ. ಬುಧವಾರ 87 ವಿದ್ಯಾರ್ಥಿಗಳಿಗೆ ಸೋಂಕು ಪತ್ತೆಯಾಗಿದೆ.

ವಸತಿ ಶಾಲೆಯ 40 ವಿದ್ಯಾರ್ಥಿಗಳಿಗೆಕೋವಿಡ್(ಆನಂದಪುರ): ಸಮೀಪದ ಇರುವಕ್ಕಿಯ ಮೆಟ್ರಿಕ್ ಪೂರ್ವ ಇಂದಿರಾ ವಸತಿಶಾಲೆಯ 40 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ.ವಸತಿಶಾಲೆಯನ್ನು ಕಂಟೈನ್ಮೆಂಟ್ ಝೋನ್ ಎಂದು ಘೋಷಿಸಲಾಗಿದೆ.

ಕಾಗೋಡು ತಿಮ್ಮಪ್ಪಗೆ ಸೋಂಕು ದೃಢ(ಸಾಗರ ): ಸಾಗರದ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರಿಗೆಕೋವಿಡ್ಪಾಸಿಟಿವ್ ಇರುವುದು ಗುರುವಾರ ದೃಢಪಟ್ಟಿದೆ ಎಂದು ಕಾಗೋಡು ಪುತ್ರಿ ಕೆಪಿಸಿಸಿ ಕಾರ್ಯದರ್ಶಿ ಡಾ.ರಾಜನಂದಿನಿ ಕಾಗೋಡು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.