ನೀರು ಹರಿಸಲು ಸೂಚಿಸಿದ್ದ ಸಮಿತಿ
‘ಮಳೆಗಾಲದಲ್ಲಿ ಕೋಲಾರದ ಯರಗೋಳ್ ಅಣೆಕಟ್ಟೆಯಿಂದ ಕರ್ನಾಟಕವು ಹಿಂದಿನ ದಿನದ ಸರಾಸರಿ ಹರಿವಿನ ಶೇ 15ರಷ್ಟು ನೀರು ಹರಿಸಬೇಕು’ ಎಂದು ಸಂಧಾನ ಸಮಿತಿಯು ಶಿಫಾರಸು ಮಾಡಿತ್ತು. ಈ ಶಿಫಾರಸಿನಲ್ಲಿ ಅಲ್ಪ ಪರಿಷ್ಕರಣೆ ಮಾಡುವಂತೆ ಕರ್ನಾಟಕ ಸರ್ಕಾರವು ಕೋರಿತ್ತು. ‘ಯರಗೋಳ್ ಅಣೆಕಟ್ಟೆಯಿಂದ ಶೇ 7.5ರಷ್ಟು ನೀರು ಮತ್ತು ಮಾಸ್ತಿ ನದಿ ಉಪ ಜಲಾನಯನ ಪ್ರದೇಶದಿಂದ ಶೇ 7.5ರಷ್ಟು ನೀರು ಹರಿಸ ಲಾಗುವುದು’ ಎಂದು ರಾಜ್ಯ ತಿಳಿಸಿತ್ತು. ಆದರೆ, ಈ ಶಿಫಾರಸನ್ನು ತಮಿಳುನಾಡ ಸರ್ಕಾರ ಒಪ್ಪಿಲ್ಲ. ಜಲವಿವಾದ ನ್ಯಾಯಮಂಡಳಿ ಸ್ಥಾಪನೆ ಆಗಲೇಬೇಕು ಎಂದು ತಮಿಳುನಾಡು ಪಟ್ಟು ಹಿಡಿದಿದೆ.