ಬೆಂಗಳೂರು: ನೌಕರರ ವೇತನ ವಿಳಂಬದ ಸಮಯದಲ್ಲಿ ಕೆಜಿಐಡಿ ವಿಮೆ, ಸಾಲದ ಮರುಪಾವತಿಗೆ ವಿಧಿಸುತ್ತಿರುವ ಬಡ್ಡಿಯನ್ನು ಕೈಬಿಡುವಂತೆ ಆರ್ಥಿಕ ಇಲಾಖೆಗೆ ಸರ್ಕಾರಿ ನೌಕರರ ಸಂಘ ಮನವಿ ಮಾಡಿದೆ.

ವೇತನ ಪಾವತಿ ಅಧಿಕಾರಿ ವರ್ಗಾವಣೆ, ಡಿಜಿಟಲ್ ಸಹಿ ಬದಲಾವಣೆ, ಕೆ–2 ಹಾಗೂ ಎಚ್ಆರ್ಎಂಎಸ್ ತಂತ್ರಾಂಶದಲ್ಲಿನ ತಾಂತ್ರಿಕ ದೋಷ, ಅನುದಾನ ಕೊರತೆ, ಅನುದಾನ ಬಿಡುಗಡೆ ವಿಳಂಬವಾದಾಗ ಎರಡು ಮೂರು ತಿಂಗಳಿಗೆ ವೇತನ ದೊರೆಯುತ್ತದೆ. ಇಂತಹ ಸಮಯದಲ್ಲಿ ಕೆಜಿಐಡಿ ಕಂತು, ಸಾಲದ ಮೇಲೆ ಬಡ್ಡಿ ವಿಧಿಸಲಾಗುತ್ತದೆ. ಮಾಡದೇ ಇರುವ ತಪ್ಪುಗಳಿಂದ ನೌಕರರಿಗೆ ತೊಂದರೆಯಾಗುತ್ತದೆ. ಹಾಗಾಗಿ, ಬಡ್ಡಿ ವಿಧಿಸದಂತೆ ತಡೆಯಲು ತಂತ್ರಾಂಶಗಳಲ್ಲೇ ಮಾರ್ಪಾಡು ಮಾಡುವಂತೆ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಆರ್ಥಿಕ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.