ಬೆಂಗಳೂರು: ಎಚ್1ಎನ್1 ಬಳಿಕ ಈಗ ಡೆಂಗಿ ಮತ್ತು ಚಿಕೂನ್ಗುನ್ಯ ರಾಜ್ಯವನ್ನು ಕಾಡಲಾರಂಭಿಸಿದೆ.
21 ತಾಲ್ಲೂಕುಗಳ 81 ಗ್ರಾಮಗಳ ವ್ಯಾಪ್ತಿಯಲ್ಲಿ ಡೆಂಗಿ ಕಾಣಿಸಿಕೊಂಡಿದೆ. 1,28,078 ಜನ ಜ್ವರದಿಂದ ಭಾದಿತ ರಾಗಿದ್ದಾರೆ. ಅದೇ ರೀತಿ ಚಿಕೂನ್ ಗುನ್ಯ ಕೂಡ 21 ತಾಲ್ಲೂಕುಗಳ 80 ಗ್ರಾಮಗಳಲ್ಲಿ ಕಂಡು ಬಂದಿದೆ. 1,63,423 ಜನ ಜ್ವರದಿಂದ ಬಾಧಿತರಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.