ಬೆಂಗಳೂರು: ‘ಭಾರತೀಯ ಸೇನೆಯಿಂದ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆ ನಡೆಯುತ್ತಿದ್ದಾಗಲೇ ಯಾವ ಆಧಾರದಲ್ಲಿ ಕದನ ವಿರಾಮ ಒಪ್ಪಿಕೊಳ್ಳಲಾಗಿದೆ ಎನ್ನುವುದನ್ನು ಪ್ರಧಾನಿ ನರೇಂದ್ರ ಮೋದಿಯವರು ಸ್ಪಷ್ಟಪಡಿಸಬೇಕು’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಆಗ್ರಹಿಸಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಉಗ್ರರನ್ನು ಮಣ್ಣುಪಾಲು ಮಾಡುವವರೆಗೂ ಬಿಡುವುದಿಲ್ಲ ಎಂದು ಮೋದಿ ಹೇಳಿದ್ದರು. ಹೀಗಾಗಿ ದೊಡ್ಡ ತೀರ್ಮಾನ ತೆಗೆದುಕೊಳ್ಳುವ ನಿರೀಕ್ಷೆ ಇತ್ತು. ದಾಳಿ ನಿಲ್ಲಿಸುವಂತೆ ಪಾಕಿಸ್ತಾನ ಅಂಗಲಾಚಿತು ಎಂದೂ ಮೋದಿ ಹೇಳಿದ್ದಾರೆ. ಆದರೆ, ಏನು ನಡೆದಿದೆ ಎಂದು ಯಾರಿಗೂ ಗೊತ್ತಿಲ್ಲ’ ಎಂದರು.

‘ನೂರಾರು ಉಗ್ರರನ್ನು ಸಾಯಿಸಿದ್ದೇವೆ ಎಂದೂ ಮೋದಿ ಹೇಳುತ್ತಾರೆ. ಯಾರಿಗೆ ಗೊತ್ತು ಎಷ್ಟು ಜನ ಸತ್ತಿದ್ದಾರೆಂದು? ಪುಲ್ವಾಮಾ ದಾಳಿ ಮಾಡಿದವರನ್ನು ಇನ್ನೂ ಬಂಧಿಸಿಲ್ಲ. ಪಹಲ್ಗಾಮ್ ಘಟನೆಗೆ ಕಾರಣರಾಗಿರುವವರು ಏನಾದರು? ಬಿಜೆಪಿಯವರು ಪ್ರತಿಯೊಂದನ್ನೂ ರಾಜಕೀಯಕ್ಕೆ ಬಳಸಿಕೊಳ್ಳುತ್ತಾರೆ’ ಎಂದೂ ಅವರು ಟೀಕಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.