ಬೆಂಗಳೂರು: ನ್ಯೂಜೆರ್ಸಿಯ ಫ್ರಾಂಕ್ಲಿನ್ ಟೌನ್‌ಶಿಪ್‌ನಲ್ಲಿ 20 ಎಕರೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಆದಿ ಚುಂಚನಗಿರಿ ಮಠಕ್ಕೆ ಭೇಟಿ ನೀಡಿದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕನ್ನಡಿಗರು ಮತ್ತು ಆದಿಚುಂಚನಗಿರಿ ಮಠದ ಭಕ್ತರು ಭೈರವನಾಥ ಪೀಠ ಸ್ಥಾಪನೆಗೆ ಆರ್ಥಿಕ ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆ.

‘ಬಾಲಗಂಗಾಧರನಾಥ ಸ್ವಾಮೀಜಿ ಮಹಾರಾಷ್ಟ್ರದಲ್ಲಿ ಸ್ಥಾಪಿಸಿದ್ದ ಭೈರವನಾಥ ದೇವಾಲಯಕ್ಕೆ ಹಿಂದೆ ನಾನು ಭೇಟಿ ನೀಡಿದ್ದೆ. ಅತ್ಯಂತ ಶಕ್ತಿಶಾಲಿಯಾದ ದೇವಸ್ಥಾನವನ್ನು ನ್ಯೂಜೆರ್ಸಿಯಲ್ಲಿ ಸ್ಥಾಪಿಸಲು ಅಮೆರಿಕ ಸರ್ಕಾರ ಅನುಮತಿ ನೀಡಿರುವುದೇ ವಿಸ್ಮಯ’ ಎಂದಿದ್ದಾರೆ.

‘ನಿರ್ಮಲಾನಂದನಾಥ ಸ್ವಾಮೀಜಿಯವರ ನೇತೃತ್ವದಲ್ಲಿ ಈ ಕನಸು ಈಡೇರುತ್ತಿದೆ. ಆಧ್ಯಾತ್ಮದ ಪರಂಪರೆಯನ್ನು ರಕ್ಷಿಸಿ, ಉತ್ತೇಜನ ನೀಡಲು ಅವರ ಮಾರ್ಗದರ್ಶನದಲ್ಲಿ ಈ ಯೋಜನೆ ಪ್ರಗತಿ ಸಾಧಿಸುತ್ತಿದೆ. ಇದರ ಶಂಕುಸ್ಥಾಪನೆಗೆ ನನ್ನನ್ನು ಆಹ್ವಾನಿಸಿದ್ದರು’ ಎಂದರು.

ದಕ್ಷಿಣ ಭಾರತದ ದೇವಾಲಯಗಳ ವಾಸ್ತುಶಿಲ್ಪವಾಗಿರುವ ಆಗಮ ಶಾಸ್ತ್ರದಂತೆ ಈ ಮಠವನ್ನು ನಿರ್ಮಾಣ ಮಾಡಲಾಗುತ್ತಿದ್ದು, ಯೋಜನೆ ಕುರಿತು ಮುಖ್ಯ ವಾಸ್ತುಶಿಲ್ಪಿ ಬಾಬು ಕೀಲಾರ ಅವರು ಶಿವಕುಮಾರ್‌ಗೆ ಮಾಹಿತಿ ನೀಡಿದರು. ಆದಿ ಚುಂಚನಗಿರಿ ಸ್ಥಳೀಯ ಮಠದ ಶ್ರೀಶೈಲನಾಥ ಸ್ವಾಮೀಜಿ, ದಯಾಶಂಕರ್ ಅಡಪ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.