ಕೋವಿಡ್-19 ಮಹಾಮಾರಿಯ ಈ ಸಂದರ್ಭದಲ್ಲಿ, ಕ್ವಾರಂಟೈನ್ ಹಾಗೂ ಐಸೊಲೇಷನ್ (ಪ್ರತ್ಯೇಕತೆ), ಇವೆರಡರ ವ್ಯತ್ಯಾಸವನ್ನು ಮನಗಾಣಬೇಕು. ಕ್ವಾರಂಟೈನ್ ಎಂದರೆ, ಸೋಂಕು ಇನ್ನೂ ತಗುಲಿರದ ಆದರೆ, ಸೋಂಕಿತ ವ್ಯಕ್ತಿಗಳ ಸಂಪರ್ಕ ಹೊಂದಿರಬಹುದಾದ ಜನರನ್ನು ಬೇರ್ಪಡಿಸುವುದು. ಇದರ ಉದ್ದೇಶ, ಇವರುಗಳಿಗೆ ಸೋಂಕು ಬರುವ ಸಾಧ್ಯತೆಯನ್ನು ಕಾದು ನೋಡುವುದಲ್ಲದೆ, ಇತರರಿಗೆ ಬರಬಹುದಾದ ಅಪಾಯದ ಪ್ರಮಾಣವನ್ನು ಕಡಿಮೆ ಮಾಡುವುದು.

ಇದಕ್ಕೆ ಹೊರತಾಗಿ, ಐಸೊಲೇಷನ್ ಎಂದರೆ, ಸೋಂಕಿತ ರೋಗಿಗಳನ್ನು, ಇತರ ರೋಗಿಗಳ ಜೊತೆ ಬೆರೆಯಲು ಬಿಡದೆ, ಪ್ರತ್ಯೇಕ ವಾರ್ಡ್ಗಳಲ್ಲಿ ಶುಷ್ರೂಷೆ/ಆರೈಕೆ ಮಾಡುವುದು.

ಸೋಂಕು ಇನ್ನೂ ತಗುಲಿರದ(ಆರೋಗ್ಯವಂತ) ವ್ಯಕ್ತಿಗಳನ್ನು ತಮ್ಮ ಕುಟುಂಬ ಸದಸ್ಯರಿಂದ ಬೇರ್ಪಡಿಸಿದಾಗ, ಸಹಜವಾಗಿ ಕೆಲವು ಸಮಸ್ಯೆಗಳು ಉಂಟಾಗುತ್ತವೆ. ಉದಾಹರಣೆಗೆ ಕ್ವಾರಂಟೈನ್ನ ಅವಧಿಯ ಬಗ್ಗೆ ಆತಂಕ, ಕ್ವಾರಂಟೈನ್ನ ಸ್ಥಳದಲ್ಲಿನ ವ್ಯವಸ್ಥೆಗಳ ಬಗ್ಗೆ ಅಸಮಾಧಾನ, ಸೋಂಕಿನ ಬಗ್ಗೆ ಅಧಿಕೃತ ಮಾಹಿತಿಯ ಕೊರತೆ, ತಮಗೆ ಸೋಂಕು ತಗುಲೀತೆಂಬ ಭಯ. ಹಾಗೆಯೇ ತಮಗೆ ಬಂದ ಅಸಹಾಯಕ ಪರಿಸ್ಥಿತಿಯ ಬಗ್ಗೆ ಹತಾಶೆ, ಸಮಯ ಕಳೆಯಲು ಬೇಸರ, ತಮ್ಮ ಸುದ್ದಿ ಬಂಧುಗಳಿಗೆ ಗೊತ್ತಾಗಬಹುದೆಂಬ ಕಳಂಕದ ಭಾವನೆ, ಕೆಲಸ ಕಳೆದುಕೊಳ್ಳುವ ಸಾಧ್ಯತೆ, ದುಃಖ/ಖಿನ್ನತೆಯ ಭಾವ, ಕೋಪ, ಆತ್ಮಹತ್ಯಾ ಭಾವನೆ ಕಾಡುವ ಸಾಧ್ಯತೆ ಇರುತ್ತದೆ. ಕೆಲವರಲ್ಲಿ, ಪೂರ್ವದಲ್ಲೇ ಅಸ್ತಿತ್ವದಲ್ಲಿದ್ದ ಕಾಯಿಲೆಗಳು ಉಲ್ಬಣಗೊಳ್ಳಬಹುದು.

ಪರಿಹಾರಕ್ಕೆ ಸಲಹೆಗಳು: ಕ್ವಾರಂಟೈನ್ನ ಉದ್ದೇಶವನ್ನು ಅರ್ಥಮಾಡಿಕೊಳ್ಳುವುದು, ಇನ್ನೂ ನಿರ್ದಿಷ್ಟವಾಗಿ ಹೇಳುವುದಾದರೆ, ತಾವುಗಳು ಸ್ವಲ್ಪ ದಿನಗಳ ಮಟ್ಟಿಗೆ ಬೇರೆಯಿದ್ದಲ್ಲಿ, ಸೋಂಕು ಹರಡುವುದನ್ನು ತಪ್ಪಿಸಬಹುದು ಎಂಬುದನ್ನು ಮನಗಾಣುವುದು ಸರಿಯಾದ ಮಾರ್ಗ. ಕೋವಿಡ್-19ರ ಬಗ್ಗೆ ಮಾಹಿತಿಯನ್ನು ಅಧಿಕೃತ ಮೂಲಗಳಿಂದ ಪಡೆಯುವುದು, ಸುಳ್ಳು ಸುದ್ದಿಗಳಿಂದ ದೂರವಿರುವುದು, ಆತಂಕಕಾರಕ ಸುದ್ದಿಗಳನ್ನು
ನೋಡದೆ ಇರುವುದು ಒಳಿತು. ನಿಯಮಿತವಾದ ಆಹಾರ ಸೇವನೆ, ವಿಶ್ರಾಂತಿ, ನಿದ್ರೆ, ವ್ಯಾಯಾಮ ಕ್ರಮಗಳನ್ನು ಪಾಲಿಸಬೇಕು. ಸರಳವಾದ ಯೋಗಾಸನಗಳನ್ನು ಅಭ್ಯಾಸ ಮಾಡಬಹುದು.

ಸಮಸ್ಯೆಗಳನ್ನು ಇತರರೊಂದಿಗೆ ಹಂಚಿಕೊಳ್ಳಬೇಕು. ವಿಶೇಷವಾಗಿ, ಮಾನಸಿಕ ಆರೋಗ್ಯದ ಪರಿಣಿತರ ಲಭ್ಯತೆ ಇದ್ದಲ್ಲಿ, ಇದು ಇನ್ನೂ ಸುಲಭ. ಕುಟುಂಬದ ಸದಸ್ಯರು ಸಹ ಕ್ವಾರಂಟೈನ್ ವ್ಯಕ್ತಿಗಳನ್ನು ಆಗಾಗ ಮಾತನಾಡಿಸುತ್ತಿರಬೇಕು, ಯೋಗಕ್ಷೇಮ ವಿಚಾರಿಸುತ್ತಿರಬೇಕು. ಆಪ್ತ ಸಮಾಲೋಚನೆ ಬಹುತೇಕ ಸಮಸ್ಯೆಗಳಿಗೆ ಸಮಾಧಾನ ತರಬಲ್ಲುದು. ಕುಟುಂಬ ಸದಸ್ಯರು/ಸ್ನೇಹಿತರು/ಬಂಧು ಬಾಂಧವರ ಜೊತೆ ಟೆಲಿಫೋನ್/ವಿಡಿಯೊ ಕಾಲಿಂಗ್ ಮೂಲಕ ಸಂಪರ್ಕದಲ್ಲಿ ಇರಬಹುದು. ಗುಂಪು ಚಟುವಟಿಕೆಗಳಲ್ಲಿ ಭಾಗವಹಿಸುವಾಗ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಮತ್ತೊಂದು ವಿಚಾರ; ಭೌತಿಕ ಅಂತರ ಎಂದರೆ, ಭಾವನಾತ್ಮಕ ಅಂತರ ಅಲ್ಲ. ನಿಮ್ಮವರ ಜೊತೆಗಿನ ಭಾವನಾತ್ಮಕ ಸಂಬಂಧವನ್ನು ಇಂತಹ ಸಮಯದಲ್ಲಿ ಮುಂದುವರಿಸುವುದು ಬಹಳ ಮುಖ್ಯ.

ಮೇಲ್ಕಾಣಿಸಿದ ಕೆಲವನ್ನು ಪಾಲಿಸಿದಲ್ಲಿ, ಕ್ವಾರಂಟೈನ್ ಅವಧಿಯ ಕಷ್ಟವನ್ನು ಸಾಕಷ್ಟು ಸುಧಾರಿಸಬಹುದು. ಒಟ್ಟಿನಲ್ಲಿ ಹೇಳುವುದಾದರೆ, ಬಂದಂತಹ ಪರಿಸ್ಥಿತಿಯನ್ನು ಮುಕ್ತ ಮನಸ್ಸಿನಿಂದ ಒಪ್ಪಿಕೊಂಡು ಸೋಂಕು ತಡೆಗಟ್ಟುವ ಬೃಹತ್ ಕಾರ್ಯಕ್ಕೆ ಸಹಕಾರವನ್ನು ಸಮಾಜದ ಎಲ್ಲ ವ್ಯಕ್ತಿಗಳು ಸಹಕರಿಸಬೇಕು.

(ಲೇಖಕ: ಮುಖ್ಯಸ್ಥರು, ಸಮುದಾಯ ಮನೋವೈದ್ಯಕೀಯ ಘಟಕ, ಮನೋವೈದ್ಯಶಾಸ್ತ್ರ ವಿಭಾಗ ನಿಮ್ಹಾನ್ಸ್, ಬೆಂಗಳೂರು)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.