ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾದೇಶಿಕ ಭೇದದಿಂದಾಗಿ ಸಂಗೀತದ ಕವಲು: ಪ್ರಕಾಶ್‌ ರಾವ್

ತ್ರಿಚೂರಿನ ರಾಮಚಂದ್ರನ್‌ಗೆ ‘ಶ್ರೀಕಂಠಶಂಕರ’ ಬಿರುದು ಪ್ರದಾನ
Last Updated 14 ಜನವರಿ 2023, 20:01 IST
ಅಕ್ಷರ ಗಾತ್ರ

ಬೆಂಗಳೂರು: ದಕ್ಷಿಣ ಮತ್ತು ಉತ್ತರದ ಭೇದದಿಂದಾಗಿ ಹಿಂದೂಸ್ತಾನಿ, ಕರ್ನಾಟಕ ಶಾಸ್ತ್ರೀಯ ಸಂಗೀತಗಳ ಕವಲು ಸೃಷ್ಟಿಯಾಗಿವೆ. ದಕ್ಷಿಣದಲ್ಲಿ ಕರ್ನಾಟಕ ಸಂಗೀತವೇ ಪ್ರಧಾನವಾಗಲು ಒಂದು ಸಾವಿರ ವರ್ಷಗಳ ಅವಧಿಯ ಕನ್ನಡಿಗರ ಶ್ರಮವಿದೆ ಎಂದು ವಿದ್ವಾನ್‌ ಪಾವಗಡ ಪ್ರಕಾಶ್‌ ರಾವ್ ಹೇಳಿದರು.

‘ವಿದ್ವಾನ್ ಆರ್.ಕೆ. ಶ್ರೀಕಂಠನ್ ಟ್ರಸ್ಟ್’ ಶನಿವಾರ ಹಮ್ಮಿ ಕೊಂಡಿದ್ದ ವಾರ್ಷಿಕ ಸಂಕ್ರಾಂತಿ ಸಂಗೀತ ಉತ್ಸವ, ಸಂಗೀತ ಕಲಾನಿಧಿ ಆರ್.ಕೆ. ಶ್ರೀಕಂಠನ್ ಅವರ 103ನೇ ಜನ್ಮ ದಿನಾಚರಣೆ ಹಾಗೂ ಬಿರುದು ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಕರ್ನಾಟಕದ್ದು ಗಂಧರ್ವ ಗಾಯನ 12ನೇ ಶತಮಾನದ ನಂತರದ ಮಾತಂಗ, ಶಾಂಗದೇವ, ವಿದ್ಯಾರಣ್ಯ, ಗೋಪಾಲ ಗಾಯಕ, ಪುಂಡಲೀಕ ವಿಠಲ ಮೊದಲಾದವರು ಕರ್ನಾಟಕ ಸಂಗೀತಕ್ಕೆ ಅಸ್ಮಿತೆ ದೊರಕಿಸಿಕೊಟ್ಟಿದ್ದಾರೆ. ಸಂಗೀತ ರತ್ನಾಕರ, ಸಂಗೀತ ಸಾರ, ಸಂಗೀತ ಕಲಾನಿಧಿ, ಕವಿರಾಜ ಮಾರ್ಗ ಕೃತಿಗಳು ಸಂಗೀತದ ಆಕರ ಗ್ರಂಥ ಗಳಾಗಿವೆ ಎಂದು ವಿವರಿಸಿದರು.

ಮಾಧ್ವಮಠಗಳು ಅಪಾರ ಶಿಷ್ಯರನ್ನು ತಯಾರಿಸಿ, ಧರ್ಮ ಪ್ರಚಾರ ಮಾಡುತ್ತಿವೆ. ಅದ್ವೈತಿ ಗಳಲ್ಲಿ ಈ ಪರಿಪಾಟ ಕಡಿಮೆ. ಶಂಕರಾಚಾರ್ಯರು ಸರ್ವಸಮಾನ ಸಿದ್ಧಾಂತ ಬೋಧಿಸಿದರು. ಎಲ್ಲರಲ್ಲೂ ಬ್ರಹ್ಮ ಇದ್ದಾನೆ. ಅದಕ್ಕಾಗಿಯೇ ಅವರು ‘ಅಹಂ ಬ್ರಹ್ಮಾಸ್ಮಿ’ ಎಂದರು.

ತ್ರಿಚೂರ್‌ನ ವಿ. ರಾಮಚಂದ್ರನ್‌ ಅವರಿಗೆ ‘ಶ್ರೀಕಂಠಶಂಕರ’ ಹಾಗೂ ಶಿವಮೊಗ್ಗ ಜಿಲ್ಲೆಯ ಮತ್ತೂರಿನ ಅಕ್ಷರಾನಂದೇಂದ್ರ ಸರಸ್ವತಿ ಸ್ವಾಮೀಜಿ ಅವರಿಗೆ ‘ಶಂಕರಾದ್ವೈತ ತತ್ವಜ್ಞ’ ಬಿರುದು ಪ್ರದಾನ ಮಾಡಲಾಯಿತು. ಭಂಡಾರಕೇರಿ ಮಠದ ವಿದ್ಯೇಶತೀರ್ಥ ಸ್ವಾಮೀಜಿ, ಗಾಯಕರಾದ ರತ್ನಮಾಲಾ ಪ್ರಕಾಶ್, ಬಿ.ಎಸ್. ಮಂಜುಳಾ, ಆರ್.ಎಸ್.ಕುಮಾರ್, ರುದ್ರಪಟ್ನಂ ಎಸ್. ರಮಾಕಾಂತ್‌ ಉಪಸ್ಥಿತರಿದ್ದರು.

ತ್ರಿಚೂರ್ ವಿ. ರಾಮಚಂದ್ರನ್, ಗಾಯಕ ಎಸ್‌.ರಮಾಕಾಂತ್ ಸಂಗೀ ತೋತ್ಸವ ನಡೆಸಿಕೊಟ್ಟರು. ಸಿ.ಎನ್. ಚಂದ್ರಶೇಖರ್ (ಪಿಟೀಲು), ವಿ. ಪ್ರವೀಣ್ (ಮೃದಂಗ), ರಂಗನಾಥ ಚಕ್ರವರ್ತಿ (ಘಟ) ಸಾಥ್‌ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT