ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಡಿದು ದ್ವಿಚಕ್ರ ವಾಹನ ಚಾಲನೆ : ದಂಡ ಪಾವತಿಸದವನಿಗೆ ಜೈಲು ಶಿಕ್ಷೆ

Last Updated 7 ಫೆಬ್ರುವರಿ 2023, 16:01 IST
ಅಕ್ಷರ ಗಾತ್ರ

ಚಿತ್ರದುರ್ಗ: ಮದ್ಯ ಸೇವಿಸಿ ದ್ವಿಚಕ್ರ ವಾಹನ ಚಾಲನೆ ಮಾಡಿ ₹ 10,250 ದಂಡ ಪಾವತಿಸಲು ಸಾಧ್ಯವಾಗದ ಸವಾರನಿಗೆ ಒಂದು ವರ್ಷ ಸಾಧಾರಣ ಶಿಕ್ಷೆ ವಿಧಿಸಿ ಸಿಜೆಎಂ ನ್ಯಾಯಾಲಯ ಮಂಗಳವಾರ ಶಿಕ್ಷೆ ವಿಧಿಸಿದೆ.

ಚಿತ್ರದುರ್ಗ ನಗರದ ಸಂಪಿಗೆ ಸಿದ್ಧೇಶ್ವರ ಶಾಲೆಯ ಹಿಂಭಾಗದ ಬಡಾವಣೆಯ ನಿವಾಸಿ ಟಿ.ರವಿಕುಮಾರ್‌ ಜೈಲು ಸೇರಿದ ಬೈಕ್‌ ಸವಾರ.

ವೃತ್ತಿಯಲ್ಲಿ ಹಮಾಲಿಯಾಗಿರುವ ರವಿಕುಮಾರ್‌, ಸಂಚಾರ ನಿಯಮ ಉಲ್ಲಂಘನೆ ಮಾಡಿದ ಆರೋಪದಡಿ ಫೆ.2ರಂದು ಮೆದೇಹಳ್ಳಿ ರಸ್ತೆಯಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಕುಡಿದು ವಾಹನ ಚಾಲನೆ ಮಾಡಿದ್ದಕ್ಕೆ ₹ 10 ಸಾವಿರ, ಅಪಾಯಕಾರಿ ಚಾಲನೆಗೆ ₹ 10 ಸಾವಿರ ಹಾಗೂ ಹೆಲ್ಮೆಟ್‌ ಧರಿಸದೇ ಇರುವುದಕ್ಕೆ ₹ 500 ದಂಡ ವಿಧಿಸುತ್ತಾರೆ. ನ್ಯಾಯಾಲಯಕ್ಕೆ ಹಾಜರಾಗಿ ದಂಡ ಪಾವತಿಸುವಂತೆ ಪೊಲೀಸರು ತಾಕೀತು ಮಾಡುತ್ತಾರೆ.

ಸಿಜೆಎಂ ನ್ಯಾಯಾಲಯಕ್ಕೆ ಮಂಗಳವಾರ ಹಾಜರಾದ ರವಿಕುಮಾರ್‌ಗೆ ದಂಡದ ಮೊತ್ತದಲ್ಲಿ ಶೇ 50ರಷ್ಟು ವಿನಾಯಿತಿ ನೀಡಿದ ನ್ಯಾಯಾಧೀಶ ಕೆಂಪರಾಜು, ₹ 10,250 ಪಾವತಿಸುವಂತೆ ಸೂಚಿಸುತ್ತಾರೆ. ತನ್ನ ಬಳಿ ₹ 2 ಸಾವಿರ ಮಾತ್ರ ಇದೆ, ಉಳಿದ ದಂಡ ಪಾವತಿಸಲು ಸಾಧ್ಯವಾಗುವುದಿಲ್ಲ ಎಂದು ಕೋರಿಕೊಳ್ಳುತ್ತಾರೆ. ದಂಡ ಪಾವತಿಸಲು ಸಾಧ್ಯವಾಗದ ಸವಾರನಿಗೆ ಶಿಕ್ಷೆ ವಿಧಿಸಿ ನ್ಯಾಯಾಧೀಶರು ಆದೇಶಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT