ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾಲಕ್ಷ್ಮಿ ಬಡಾವಣೆ| ಎಂಟು ಪಟ್ಟು ಏರಿದ ಅಬಕಾರಿ ಸಚಿವರ ಆಸ್ತಿ!

₹ 11.99 ಕೋಟಿಯಿಂದ ₹ 96.15 ಕೋಟಿಗೆ ಜಿಗಿತ
Last Updated 18 ಏಪ್ರಿಲ್ 2023, 5:32 IST
ಅಕ್ಷರ ಗಾತ್ರ

ಬೆಂಗಳೂರು: ಮಹಾಲಕ್ಷ್ಮಿ ಬಡಾವಣೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಅಬಕಾರಿ ಸಚಿವ ಕೆ. ಗೋಪಾಲಯ್ಯ ಅವರ ಕುಟುಂಬದ ಒಟ್ಟು ಆಸ್ತಿ ಮೂರು ವರ್ಷಗಳಲ್ಲೇ ಎಂಟು ಪಟ್ಟು ಹೆಚ್ಚಳವಾಗಿದೆ.

ಗೋಪಾಲಯ್ಯ ಕುಟುಂಬದ ಬಳಿ 2019ರ ನವೆಂಬರ್‌ನಲ್ಲಿ ಒಟ್ಟು₹ 11.99 ಕೋಟಿ ಮೌಲ್ಯದ ಆಸ್ತಿ ಇತ್ತು. ಈಗ ಅವರ ಕುಟುಂಬದ ಒಟ್ಟು ಆಸ್ತಿಯ ಮೌಲ್ಯ ₹ 96.15 ಕೋಟಿ. ಸಚಿವರು ಮತ್ತು ಅವರ ಪತ್ನಿ ಎಸ್‌.ಪಿ. ಹೇಮಲತಾ ಇಬ್ಬರೂ ಮಹಾಲಕ್ಷ್ಮಿ ಬಡಾವಣೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಗಳಾಗಿ ಸೋಮವಾರ ನಾಮಪತ್ರ ಸಲ್ಲಿಸಿದರು.

2019ರ ಉಪ ಚುನಾವಣೆ ಸಂದರ್ಭದಲ್ಲಿ ಗೋಪಾಲಯ್ಯ ಕುಟುಂಬ ಒಟ್ಟು ₹ 11.78 ಕೋಟಿ ಮೌಲ್ಯದ ಸ್ಥಿರಾಸ್ತಿ ಹೊಂದಿತ್ತು. ಈಗ ಅವರ ಕುಟುಂಬ ಹೊಂದಿರುವ ಒಟ್ಟು ಸ್ಥಿರಾಸ್ತಿ ₹ 95.91 ಕೋಟಿ ಮೌಲ್ಯದ್ದು ಎಂದು ಚುನಾವಣಾಧಿಕಾರಿಗೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ತಿಳಿಸಿದ್ದಾರೆ.

ಇಬ್ಬರ ಆದಾಯದಲ್ಲೂ ಗಣನೀಯ ಏರಿಕೆಯಾಗಿದೆ. 2019ರಲ್ಲಿ ಗೋಪಾಲಯ್ಯ ಅವರ ವಾರ್ಷಿಕ ಆದಾಯ ₹ 6.70 ಲಕ್ಷ ಇದ್ದು, ಈಗ ₹ 3.47 ಕೋಟಿಗೆ ಏರಿಕೆಯಾಗಿದೆ. ಹೇಮಲತಾ ಅವರ ವಾರ್ಷಿಕ ಆದಾಯ ₹ 5.21 ಲಕ್ಷದಿಂದ ₹ 3.37 ಕೋಟಿಗೆ ಏರಿಕೆಯಾಗಿದೆ. ಸಾಲದಲ್ಲೂ ಭಾರಿ ಏರಿಕೆಯಾಗಿದೆ. ಸಚಿವರು 2019ರಲ್ಲಿ ₹ 1.79 ಕೋಟಿ ಸಾಲ ಹೊಂದಿದ್ದರು. ಈಗ ಸಾಲದ ಮೊತ್ತ ₹ 22.49 ಕೋಟಿಗೆ ಏರಿಕೆಯಾಗಿದೆ. ಪತ್ನಿಯ ಸಾಲ ₹ 5.26 ಕೋಟಿಯಿಂದ ₹ 26.01 ಕೋಟಿಗೆ ಹೆಚ್ಚಳವಾಗಿದೆ ಎಂಬ ಮಾಹಿತಿ ಪ್ರಮಾಣ ಪತ್ರದಲ್ಲಿದೆ.

ಸಚಿವರ ಬಳಿ ಮಹೀಂದ್ರಾ ಜೀಪ್‌, ಟೊಯೊಟಾ ಕ್ವಾಲಿಸ್‌, ಟೊಯೊಟಾ ಇನ್ನೋವಾ, ಟೊಯೊಟಾ ಫಾರ್ಚೂನರ್‌ ಕಾರುಗಳಿವೆ. ಕುಟುಂಬದ ಬಳಿ 18 ಕೆ.ಜಿ. ಬೆಳ್ಳಿ ಮತ್ತು 2 ಕೆ.ಜಿ.ಯಷ್ಟು ಚಿನ್ನವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT