ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್ ಬಿಲ್ ಹಿಂಬಾಕಿ ಇದ್ದರೂ ‘ಗೃಹಜ್ಯೋತಿ’ಗೆ ಅರ್ಹರು

ಇಂಧನ ಇಲಾಖೆ ತಿಳಿಸಿದೆ
Published 2 ಜುಲೈ 2023, 16:16 IST
Last Updated 2 ಜುಲೈ 2023, 16:16 IST
ಅಕ್ಷರ ಗಾತ್ರ

ಬೆಂಗಳೂರು: ‘ಗ್ರಾಹಕರು ವಿದ್ಯುತ್ ಬಿಲ್ ಹಿಂಬಾಕಿ ಉಳಿಸಿಕೊಂಡಿದ್ದರೂ ‘ಗೃಹಜ್ಯೋತಿ’ ಯೋಜನೆಯ ಪ್ರಯೋಜನ ಸಿಗಲಿದೆ. ಆದರೆ, ಹಿಂಬಾಕಿ ಮೊತ್ತವನ್ನು ಸೆ. 30ರ ಒಳಗೆ (ಮೂರು ತಿಂಗಳು ಕಾಲಾವಕಾಶ) ಪಾವತಿಸಬೇಕು’ ಎಂದು ಇಂಧನ ಇಲಾಖೆ ತಿಳಿಸಿದೆ.

ಗೃಹಜ್ಯೋತಿ ಯೋಜನೆಗೆ ಗ್ರಾಹಕರು ಜುಲೈ 25ರ ಒಳಗೆ ‌ನೋಂದಾಯಿಸಿಕೊಂಡರೆ, ಆಗಸ್ಟ್ ತಿಂಗಳ ಬಿಲ್‌ನಲ್ಲಿ ಪ್ರಯೋಜನ ಸಿಗಲಿದೆ. ಅದೇ ರೀತಿ ಜುಲೈ 25ರಿಂದ ಆಗಸ್ಟ್ 25ರ ಒಳಗೆ ನೋಂದಾಯಿಸಿಕೊಂಡರೆ ಸೆಪ್ಟೆಂಬರ್ ತಿಂಗಳ ಬಿಲ್‌ನಲ್ಲಿ ಪ್ರಯೋಜನ ದೊರೆಯಲಿದೆ (ಪ್ರತಿ ತಿಂಗಳು 25ನೇ ತಾರೀಕಿನಿಂದ ನಂತರದ ತಿಂಗಳ 25ನೇ ತಾರೀಕಿನವರೆಗೆ ಬಿಲ್‌ ಮಾಡಲಾಗುತ್ತದೆ).

ಯೋಜನೆಯ ಪ್ರಯೋಜನ ಪಡೆಯಲು ವಿದ್ಯುತ್ ಬಳಕೆಯ ಸರಾಸರಿ 200 ಯೂನಿಟ್ ಮೀರಿರಬಾರದು. ಗ್ರಾಹಕರು ಜುಲೈ 25ರ ನಂತರ ಅರ್ಜಿ ಸಲ್ಲಿಸಿದರೆ ಅವರಿಗೆ ಆಗಸ್ಟ್ ತಿಂಗಳಲ್ಲಿ ಬರುವ ಬಿಲ್‌ನಲ್ಲಿ ಪ್ರಯೋಜನ ಸಿಗುವುದಿಲ್ಲ. ಆದರೆ, ಯೋಜನೆಯ ಪ್ರಯೋಜನವನ್ನು ಸೆಪ್ಟೆಂಬರ್ ತಿಂಗಳಲ್ಲಿ ಪಡೆಯಲಿದ್ದಾರೆ. ಹೀಗಾಗಿ, ಯೋಜನೆಯ ಪ್ರಯೋಜನ ಪಡೆಯಲು ತಕ್ಷಣವೇ ನೋಂದಣಿ ಮಾಡಿಕೊಳ್ಳಬೇಕು ಎಂದೂ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT