ಬೆಂಗಳೂರು: ‘ಅಪರಾಧಿಯೊಬ್ಬರಿಗೆ ಸಾಯುವವರೆಗೂ ಜೈಲು ಶಿಕ್ಷೆ ವಿಧಿಸುವ ಅಧಿಕಾರ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ಗಳಿಗೆ ಮಾತ್ರವೇ ಇದೆ’ ಎಂದು ಹೈಕೋರ್ಟ್ ಪ್ರಕರಣವೊಂದರಲ್ಲಿ ಸ್ಪಷ್ಟಪಡಿಸಿದೆ.

ಮೂರೂವರೆ ವರ್ಷದ ಮಗುವನ್ನು ಕೊಲೆ ಮಾಡಿದ್ದ ಪ್ರಕರಣದ ಅಪರಾಧಿ ರುದ್ರೇಶ್ ಅಲಿಯಾಸ್ ರುದ್ರಯ್ಯ (28), ‘ನನಗೆ ಸಾಯುವವರೆಗಿನ ಜೀವಿತಾವಧಿ ಜೈಲು ಶಿಕ್ಷೆ ವಿಧಿಸಿರುವ ಶಿವಮೊಗ್ಗದ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಆದೇಶ ರದ್ದುಪಡಿಸಬೇಕು’ ಎಂದು ಕೋರಿ ಹೈಕೋರ್ಟ್ ಗೆ ಕ್ರಿಮಿನಲ್ ಮೇಲ್ಮನವಿ ಸಲ್ಲಿಸಿದ್ದರು.

ಈ ಮೇಲ್ಮನವಿಯನ್ನು ಭಾಗಶಃ ಪುರಸ್ಕರಿಸಿರುವ ನ್ಯಾಯಪೀಠ, ರುದ್ರೇಶ್ಗೆ ಸಾಯುವವರೆಗೆ ಜೀವಿತಾವಧಿ ಶಿಕ್ಷೆ ವಿಧಿಸಿರುವ ಸೆಷನ್ಸ್ ಕೋರ್ಟ್ ಆದೇಶದಲ್ಲಿ ಮಾರ್ಪಾಡು ಮಾಡಿದೆ. ಸಾಯುವವರೆಗಿನ ಜೈಲು ಶಿಕ್ಷೆ ಬದಲಾಗಿ ಜೀವಾವಧಿ ಶಿಕ್ಷೆ ವಿಧಿಸಿ ಆದೇಶಿಸಿದೆ.

‘ಸಾಯುವವರೆಗೆ ಜೈಲು ಶಿಕ್ಷೆ ವಿಧಿಸುವ ಅಧಿಕಾರವನ್ನು ಸಾಂವಿಧಾನಿಕ ನ್ಯಾಯಾಲಯಗಳಾದ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ಗಳು ಮಾತ್ರವೇ ಹೊಂದಿವೆ. ಈ ಅಧಿಕಾರ ಸೆಷನ್ಸ್ ಕೋರ್ಟ್ಗೆ ಇಲ್ಲ’ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ. ಮೇಲ್ಮನವಿದಾರರ ಪರ ಹೈಕೋರ್ಟ್ ವಕೀಲ ಎಸ್.ಸುನಿಲ್ ಕುಮಾರ್ ವಾದ ಮಂಡಿಸಿದ್ದರು.

ಜೀವಾವಧಿ ಶಿಕ್ಷೆಯಾದರೆ 14 ವರ್ಷ ಜೈಲು ಶಿಕ್ಷೆ ಪೂರೈಸಿದ ನಂತರ ಸನ್ನಡತೆ ಆಧಾರದಲ್ಲಿ ಸರ್ಕಾರಕ್ಕೆ, ಕೈದಿಯನ್ನು ಬಿಡುಗಡೆ ಮಾಡುವ ಅಧಿಕಾರ ಮತ್ತು ಅವಕಾಶವಿರುತ್ತದೆ.

ಪ್ರಕರಣವೇನು?:

ಶಿವಮೊಗ್ಗ ಜಿಲ್ಲೆಯ ಹೊಸಮನೆ ಗ್ರಾಮದ ನಿವಾಸಿ ರುದ್ರೇಶ್, ಹೊಸನಗರದ ಮಠವೊಂದರಲ್ಲಿ ಕೆಲಸ ಮಾಡುತ್ತಿದ್ದರು. ಕೊಲೆಗೀಡಾದ ಮಗುವಿನ ತಾಯಿ (ಪ್ರಕರಣದ ದೂರುದಾರೆ) ಆ ಮಠದ ಭಕ್ತೆಯಾಗಿದ್ದರು. ನಿಯಮಿತವಾಗಿ ಮಠಕ್ಕೆ ಭೇಟಿ ನೀಡುತ್ತಿದ್ದರು. ಮಠದ ವ್ಯವಹಾರಗಳಲ್ಲಿ ರುದ್ರೇಶ್ಗೆ ದೂರುದಾರೆ ಮತ್ತು ಆಕೆಯ ತಾಯಿ ಸಲಹೆ ನೀಡುತ್ತಿದ್ದರು. ಇದೇ ವಿಚಾರವಾಗಿ ದೂರುದಾರೆಯ ಬಗ್ಗೆ ರುದ್ರೇಶ್ ದ್ವೇಷ ಬೆಳೆಸಿಕೊಂಡಿದ್ದರು.

2017ರ ಏಪ್ರಿಲ್ 10ರಂದು ಮಠದ ಕಾರ್ಯಕ್ರಮವೊಂದರಲ್ಲಿ ದೂರುದಾರೆ ತನ್ನ ಮೂರೂವರೆ ವರ್ಷದ ಗಂಡು ಮಗು ಮತ್ತು ಕುಟುಂಬದ ಸದಸ್ಯರೊಂದಿಗೆ ಭಾಗಿಯಾಗಿದ್ದರು. ಅಂದು ರಾತ್ರಿ ಮಠದಲ್ಲೇ ಊಟ ಮಾಡಿ ಮಲಗಿದ್ದರು. ಬೆಳಿಗ್ಗೆ 5.30ಕ್ಕೆ ಎಚ್ಚರಗೊಂಡಾಗ ಮಗು ಪಕ್ಕದಲ್ಲಿ ಇರಲಿಲ್ಲ. ನಂತರ ಆ ಮಗು ಶವವಾಗಿ ಪತ್ತೆಯಾಗಿತ್ತು.

ಈ ಕುರಿತು ಹೊಸನಗರ ಠಾಣಾ ಪೊಲೀಸರು ತನಿಖೆ ನಡೆಸಿದಾಗ, ಮಗುವನ್ನು ರುದ್ರೇಶ್ ಅಪಹರಿಸಿ ಕೊಲೆ ಮಾಡಿದ್ದ ಕೃತ್ಯ ಬಯಲಾಗಿತ್ತು.

ಕೊಲೆ ಮತ್ತು ಅಪಹರಣ ಅರೋಪದಡಿ ರುದ್ರೇಶ್ ಅವರನ್ನು 2017ರ ನವೆಂಬರ್ 27ರಂದು ದೋಷಿ ಎಂದು ತೀರ್ಮಾನಿಸಿದ್ದ ಸೆಷನ್ಸ್ ನ್ಯಾಯಾಲಯ ಸಾಯುವವರೆಗೂ ಅಂದರೆ ಜೀವಿತಾವಧಿ ಶಿಕ್ಷೆ ವಿಧಿಸಿ ಆದೇಶಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.