ಇಂತಹ ವಿಷಯಗಳ ಚರ್ಚೆ ನಡೆದು ಮನೆಗೆ ಹೋದಾಗ ಮನೆಯಲ್ಲಿ ತಾಯಿ ಮತ್ತು ನನ್ನ ಹೆಂಡತಿ ಬೈಯ್ಯುತ್ತಾರೆ
ಪ್ರಿಯಾಂಕ್ ಖರ್ಗೆ
ಇದೊಂದು ಗಂಭೀರ ಪ್ರಕರಣ. ಮುಖ್ಯಮಂತ್ರಿ ಮತ್ತು ಸಚಿವರಿಗೆ ರಕ್ಷಣೆ ಇಲ್ಲ. ರಾಜಕಾರಣ ಎಷ್ಟು ಮಟ್ಟಿಗೆ ಕುಸಿದಿದೆ ಎಂಬುದಕ್ಕೆ ಈ ಪ್ರಕರಣ ಸಾಕ್ಷಿ
ಆರಗ ಜ್ಞಾನೇಂದ್ರ ಬಿಜೆಪಿ
ಸಂಪುಟದ ಸಚಿವರೊಬ್ಬರು ಹನಿಟ್ರ್ಯಾಪ್ ಮಾಡಿಸಿದ್ದು ಎಂಬ ದೂರಿನ ಬಗ್ಗೆ ನ್ಯಾಯಾಂಗ ಅಥವಾ ಇನ್ಯಾವುದೇ ತನಿಖೆ ನಡೆಸಿ
ಸುರೇಶ್‌ಬಾಬು, ಜೆಡಿಎಸ್ ಶಾಸಕ
ರಾಜ್ಯಪಾಲರಿಗೆ ದೂರು
ವಿಧಾನಸಭೆಯ ಕಲಾಪ ಮುಕ್ತಾ
ಯವಾದ ಬಳಿಕ ಬಿಜೆಪಿ ಮತ್ತು ಜೆಡಿಎಸ್ ಶಾಸಕರು ರಾಜಭವ
ನಕ್ಕೆ ತೆರಳಿ, ‘ಹನಿ ಟ್ರ್ಯಾಪ್’ ಆರೋಪದ ಕುರಿತು ತನಿಖೆ ನಡೆ
ಸಲು ರಾಜ್ಯ ಸರ್ಕಾರ ಹಿಂದೇಟು ಹಾಕುತ್ತಿದೆ ಎಂದು ದೂರು ಸಲ್ಲಿಸಿದರು.
ವಿರೋಧ ಪಕ್ಷದ ನಾಯಕ ಆರ್. ಅಶೋಕ ಮತ್ತು ಜೆಡಿಎಸ್
ಶಾಸಕಾಂಗ ಪಕ್ಷದ ನಾಯಕ ಸಿ.ಬಿ. ಸುರೇಶ್ ಬಾಬು ನಿಯೋ
ಗದ ನೇತೃತ್ವ ವಹಿಸಿದ್ದರು. ‘ಹನಿ ಟ್ರ್ಯಾಪ್’ ಆರೋಪದ ಕುರಿತು ಉನ್ನತ ಮಟ್ಟದ ತನಿಖೆ
ನಡೆಸುವಂತೆ ಹಾಗೂ ಬಿಜೆಪಿ
ಶಾಸಕರ ಅಮಾನತು ಮಾಡಿರು
ವುದನ್ನು ಹಿಂಪಡೆಯಲು ಸೂಚಿ
ಸುವಂತೆ ನಿಯೋಗ ಮನವಿ ಮಾಡಿದೆ. ರಾಜ್ಯಪಾಲ ಥಾವರ
ಚಂದ್ ಗೆಹಲೋತ್ ರಾಜಭವನದಲ್ಲಿ ಇರಲಿಲ್ಲ. ರಾಜ್ಯಪಾಲರ ಸಚಿವಾಲಯದ ಅಧಿಕಾರಿಗಳು ಮನವಿ ಸ್ವೀಕರಿಸಿದರು.