ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸ್ವಾಭಿಮಾನ’ದ ಅಲೆಯಲ್ಲಿ ದಡ ಸೇರಿದ ಶರತ್‌

ಶ್ರೀಮಂತರ ರಾಜಕಾರಣಿಯ ಹೊಸಕೋಟೆ ಛಿದ್ರ
Last Updated 9 ಡಿಸೆಂಬರ್ 2019, 20:16 IST
ಅಕ್ಷರ ಗಾತ್ರ

ಬೆಂಗಳೂರು: ಉಪಚುನಾವಣೆ ನಡೆದ 15 ಕ್ಷೇತ್ರಗಳಲ್ಲೇ ಬಂಡಾಯದ ಕಾರಣದಿಂದಾಗಿಯೇ ಸದ್ದು ಮಾಡಿದ್ದ ಹೊಸಕೋಟೆ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಶರತ್‌ ಬಚ್ಚೇಗೌಡ ‘ಸ್ವಾಭಿಮಾನ’ದ ಅಲೆಯಲ್ಲಿ ತೇಲುತ್ತ ಗೆಲುವಿನ ದಡ ಸೇರಿದ್ದಾರೆ.

ಬಿಜೆಪಿ ಸಂಸದ ಬಿ.ಎನ್‌.ಬಚ್ಚೇಗೌಡ (ಶರತ್‌ ಅವರ ತಂದೆ) ಕುಟುಂಬ ಹಾಗೂ ಈ ಹಿಂದೆ ಕಾಂಗ್ರೆಸ್‌ನಲ್ಲಿದ್ದ ರಾಜ್ಯದ ಅತ್ಯಂತ ಶ್ರೀಮಂತ ರಾಜಕಾರಣಿ ಎಂಟಿಬಿ ನಾಗರಾಜ್‌ ಕುಟುಂಬದ ನಡುವೆ ಹಿಂದಿನಿಂದಲೂ ಬದ್ಧ ವೈಷಮ್ಯ. ಕಾಂಗ್ರೆಸ್‌ಗೆ ಎಂಟಿಬಿ ಕೈಕೊಟ್ಟು ಕಮಲ ಪಾಳಯಕ್ಕೆ ಜಿಗಿದಂದಿನಿಂದಲೇ ಈ ಕ್ಷೇತ್ರದ ಫಲಿತಾಂಶ ತೀವ್ರ ಕುತೂಹಲ ಕೆರಳಿಸಿತ್ತು.

ಹೆಬ್ಬಾಳ ಶಾಸಕ ಬಿ.ಎಸ್‌.ಸುರೇಶ್‌ ಅವರ ಪತ್ನಿ ಪದ್ಮಾವತಿ ಅವರನ್ನು ಕಣಕ್ಕಿಳಿಸಿ ಕಾಂಗ್ರೆಸ್‌ ಪಕ್ಷದ ಮತಗಳನ್ನು ಉಳಿಸಿಕೊಳ್ಳುವ ತಂತ್ರಗಾರಿಕೆ ರೂಪಿಸಿತು. ಅದಕ್ಕೆ ಪೂರಕವಾಗಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬಿಜೆಪಿ ಅಭ್ಯರ್ಥಿ ವಿರುದ್ಧ ಮೂರು ಸಲ ಪ್ರಚಾರ ಕೈಗೊಳ್ಳುವ ಮೂಲಕಕ್ಷೇತ್ರದಲ್ಲಿ ನಿರ್ಣಾಯಕ ಸಂಖ್ಯೆಯಲ್ಲಿರುವ ಕುರುಬ ಸಮುದಾಯದ ಮತ ಸಾರಾಸಗಟಾಗಿ ನಾಗರಾಜ್‌ ಪಾಲಾಗುವುದನ್ನು ತಡೆದರು. ಬಿಜೆಪಿ ಮತಗಳ ಜೊತೆಗೆ ತನ್ನ ವರ್ಚಸ್ಸೂ ಕೈಹಿಡಿಯಲಿದೆ ಎಂದು ನಂಬಿ ಪಕ್ಷಾಂತರ ಮಾಡಿದ್ದ ನಾಗರಾಜ್‌ ನಿರಾಶೆ ಅನುಭವಿಸಬೇಕಾಯಿತು.

2018ರ ಚುನಾವಣೆಯಲ್ಲಿ ಅಲ್ಪಮತಗಳಿಂದ ಸೋತಿದ್ದ ಶರತ್‌, ಈ ಸಲ ಆರಂಭದಿಂದಲೇ ಕಾರ್ಯತಂತ್ರ ರೂಪಿಸಿ ಗೆಲುವಿನ ನಗೆ ಬೀರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT