ಬೆಂಗಳೂರು: ‘ಗೃಹ ಸಚಿವ ಪರಮೇಶ್ವರ ಅವರೇ ನಿಮ್ಮ ಇಲಾಖೆ ಎಚ್ಚೆತ್ತುಕೊಳ್ಳಲು ಇನ್ನೂ ಎಷ್ಟು ಜನರು ಬಲಿಯಾಗಬೇಕು? ಇನ್ನೂ ಎಂತೆಂತಹ ದುರ್ಘಟನೆಗಳು ನಡೆಯಬೇಕು’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಪ್ರಶ್ನಿಸಿದ್ದಾರೆ.

ಬಾಲಕನನ್ನು ಅಪಹರಿಸಿ, ಕೊಲೆ ಮಾಡಿ, ಸುಟ್ಟಿರುವ ಪ್ರಕರಣದ ಬಗ್ಗೆ ‘ಎಕ್ಸ್’ ಮೂಲಕ ಪ್ರತಿಕ್ರಿಯೆ ನೀಡಿದ್ದು, ‘ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸತ್ತು ಹೋಗಿದೆ ಎನ್ನುವುದಕ್ಕೆ, ಇದಕ್ಕಿಂತ ದೊಡ್ಡ ಘಟನೆ ಬೇಕಾ’ ಎಂದಿದ್ದಾರೆ.

‘ಟ್ಯೂಷನ್ ಮುಗಿಸಿಕೊಂಡು ಬರುತ್ತಿದ್ದ 13 ವರ್ಷದ ಬಾಲಕನನ್ನು ಅಪಹರಣ ಮಾಡಿ, ಹಣಕ್ಕೆ ಬೇಡಿಕೆ ಇಟ್ಟು, ಕಡೆಗೆ ಬಾಲಕನ ಕತ್ತು ಕೊಯ್ದು ಕೊಲೆ ಮಾಡಿ, ಮೃತ ದೇಹವನ್ನು ಸುಟ್ಟಿರುವ ದಾರುಣ ಘಟನೆ ಎಂತಹವರನ್ನೂ ಬೆಚ್ಚಿ ಬೀಳಿಸುತ್ತದೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.