ವಿಜಯಪುರ: ‘ಮತಕ್ಷೇತ್ರದ ಜೆಡಿಎಸ್‌ನ ಒಂಬತ್ತು ಪ್ರಮುಖರ ಅಭಿಪ್ರಾಯದ ಮೇರೆಗೆ ಮುಸ್ಲಿಂ ಮಹಿಳೆಯನ್ನು ವಿಧಾನಸೌಧದಲ್ಲಿ ಕೂರಿಸಲು ಮುಂದಾದರೆ ನನ್ನನ್ನು ಬಿಜೆಪಿ ಏಜೆಂಟ್ ಎಂದು ಕಾಂಗ್ರೆಸ್ ಪಕ್ಷದವರು ಮಾಡುತ್ತಿರುವ ಆರೋಪ ಸರಿಯಲ್ಲ. ಬದುಕಿನ ಕೊನೆ ಘಟ್ಟದಲ್ಲಿರುವ ನಾನು ಅಂಥ ಪಾಪದ ಕೆಲಸ ಮಾಡುವುದಿಲ್ಲ’ ಎಂದು ಜೆಡಿಎಸ್ ರಾಷ್ಟ್ರೀಯ ಪಕ್ಷದ ಅಧ್ಯಕ್ಷ ಎಚ್.ಡಿ.ದೇವೇಗೌಡ ಹೇಳಿದರು.

ಸಿಂದಗಿ ತಾಲ್ಲೂಕಿನ ಯಂಕಂಚಿ ಗ್ರಾಮದಲ್ಲಿ ಮಂಗಳವಾರ ಜೆಡಿಎಸ್ ಅಭ್ಯರ್ಥಿ ನಾಜಿಯಾ ಅಂಗಡಿ ಪರ ಮತಯಾಚಿಸಿ ಮಾತನಾಡಿ, ‘ನಾವು ಸೋಲಿಗಾಗಿ ಚುನಾವಣೆಯಲ್ಲಿ ಸ್ಫರ್ಧೆ ಮಾಡ್ತೀವಾ’ ಎಂದು ವಿರೋಧಿಗಳಿಗೆ ಪ್ರಶ್ನಿಸಿದರು.

‘ಇಂಥ ಇಳಿ ವಯಸ್ಸಿನಲ್ಲೂ ಕಳೆದ ಐದು ದಿನಗಳಿಂದ ಚುನಾವಣಾ ಪ್ರಚಾರ ನಡೆಸಿದ್ದು ನನ್ನ ಸತ್ವ ಪರೀಕ್ಷೆಯಾಗಿದೆ. ನಿಮ್ಮ ಮನೆ ಬಾಗಿಲಿಗೆ 30 ವರ್ಷಗಳ ನಂತರ ಬಂದಿರುವೆ. ನನ್ನ ಬೆಂಬಲದಿಂದ ಬೆಳೆದ ಮನುಷ್ಯ ದಿವಂಗತ ಎಂ.ಸಿ.ಮನಗೂಳಿ, ಅವರ ಪುತ್ರನಿಗೆ ಕಾಂಗ್ರೆಸ್‌ಗೆ ಹೋಗಬೇಡ ಎಂದು ತಿಳಿಸಿದ 3-4 ಗಂಟೆಗಳಲ್ಲಿ ಆ ಪಕ್ಷಕ್ಕೆ ಸೇರಿಕೊಂಡಿರುವುದು ಆಘಾತ ಉಂಟುಮಾಡಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.