ಬೆಂಗಳೂರು: 2019 ರ ಸಾಲಿನ ಪ್ರಥಮ ಪಿಯು ಅಂತಿಮ ಪರೀಕ್ಷೆ ದಿನಾಂಕದಲ್ಲಿ ಸ್ವಲ್ಪ ಮಾರ್ಪಾಡು ಮಾಡಿದ್ದು, ಜನವರಿ 30 ರಿಂದ ಫೆಬ್ರುವರಿ 11 ರವರೆಗೆ ಪರೀಕ್ಷೆಗಳು ನಡೆಯಲಿವೆ.
ಈ ಹಿಂದೆ ಜನವರಿ 31 ರಿಂದ ಫೆಬ್ರುವರಿ 9 ರವರಗೆ ನಿಗದಿ ಮಾಡಲಾಗಿತ್ತು. ಅಲ್ಲದೆ ಪ್ರಥಮ ಪಿಯು ವಿಜ್ಞಾನ ಮತ್ತು ಇತರ ವಿಷಯಗಳ ಪ್ರಾಯೋಗಿಕ ಪರೀಕ್ಷೆಗಳನ್ನು ಜನವರಿ 3 ರಿಂದ 12 ರವರೆಗೆ ನಡೆಸಲಾಗುವುದು ಎಂದು ಪದವಿ ಪೂರ್ವ ಶಿಕ್ಷಣ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದ್ವಿತೀಯ ಪಿಯು ಪರೀಕ್ಷೆ ಪ್ರಾಯೋಗಿಕ ಪರೀಕ್ಷೆ
ದ್ವಿತೀಯ ಪಿಯು ವಾರ್ಷಿಕ ಪ್ರಾಯೋಗಿಕ ಪರೀಕ್ಷೆ ಜನವರಿ 21 ರಿಂದ ಫೆಬ್ರುವರಿ 6 ರೊಳಗೆ ನಡೆಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.