ಬೆಂಗಳೂರು: ನಗರದ ರಿಯಲ್ ಎಸ್ಟೇಟ್ ಉದ್ಯಮಿ ಜಿ. ಪ್ರಸಾದ್ ರೆಡ್ಡಿಯವರ ಮನೆ ಹಾಗೂ ಕಚೇರಿ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಸೋಮವಾರ ಮಧ್ಯಾಹ್ನ ದಾಳಿ ನಡೆಸಿದ್ದಾರೆ.

ಪ್ರಸಾದ್ ಅವರ ನಂಬಿಕಸ್ಥ ಉದ್ಯೋಗಿ ಸಯ್ಯದ್ ಅಲೀಮುದ್ದೀನ್ ಅವರ ಮನೆ ಮೇಲೂ ದಾಳಿ ಆಗಿದೆ. ಇದು ಬೌರಿಂಗ್ ಕ್ಲಬ್‌ನಲ್ಲಿ ಈಚೆಗೆ ನಡೆದ ಶೋಧ ಕಾರ್ಯಾಚರಣೆಯ ಮುಂದುವರಿದ ಭಾಗವಾಗಿದೆ. ಪ್ರಸಾದ್ ಅವರ ಕೋರಮಂಗಲದ ಮನೆ, ಸೇಂಟ್ ಮಾರ್ಕ್ಸ್ ರಸ್ತೆಯಲ್ಲಿರುವ ಕಚೇರಿ ಒಳಗೊಂಡಂತೆ ಎಲ್ಲ ಸ್ಥಳಗಳನ್ನು ಏಕಕಾಲಕ್ಕೆ ಶೋಧಿಸಲಾಗಿದೆ. ಮಧ್ಯಾಹ್ನ 12.30ರ ಸುಮಾರಿಗೆ ಬಂದ 20ಕ್ಕೂ ಹೆಚ್ಚು ಅಧಿಕಾರಿಗಳ ತಂಡ ಕಾರ್ಯಾಚರಣೆ ನಡೆಸಿತು ಎಂದು ಮೂಲಗಳು ತಿಳಿಸಿವೆ.

ಕ್ಲಬ್‌ನ ಮೂರು ಲಾಕರ್‌ಗಳಲ್ಲಿ ಅವಿನಾಶ್ ಅಮರಲಾಲ್ ಕುಕ್ರೇಜ ಅವರು ಬಚ್ಚಿಟ್ಟಿದ್ದರು ಎನ್ನಲಾದ ಹಣ– ಆಭರಣ ಮತ್ತು ಆಸ್ತಿಪಾಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ಈ ತಿಂಗಳ 20ರಂದು ಐ.ಟಿ ಅಧಿಕಾರಿಗಳು ವಶಪಡಿಸಿಕೊಂಡಿದ್ದರು. ಇದರಲ್ಲಿ ನಿವೇಶನಗಳ ಖರೀದಿಗೆ ಸಂಬಂಧಿಸಿದ ಏಳು ಫೈಲ್‌ಗಳೂ ಸೇರಿದ್ದು, ಇವುಗಳನ್ನು ರೆಡ್ಡಿ ಅವರು ಅವಿನಾಶ್ ಹಾಗೂ ಅಸರ
ದಾಸ್ ಪಾಲುದಾರರಾಗಿರುವ ‘ಅನುಷ್ಕಾ ಎಸ್ಟೇಟ್ಸ್’ಗೆ ಮಾರಿದ್ದಾರೆ ಎನ್ನಲಾಗಿದೆ.

ಪ್ರಸಾದ್‌ರೆಡ್ಡಿ ಯಾರು?: ಪ್ರಸಾದ್ ರೆಡ್ಡಿ ನಗರದ ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದು, 2008ರ ವಿಧಾನಸಭೆ ಚುನಾವಣೆಯಲ್ಲಿ ಬಿ.ಟಿ.ಎಂ ಲೇಔಟ್ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದರು. ಆ ಸಮಯದಲ್ಲಿ ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದ ಪ್ರಮಾಣ ಪತ್ರದಲ್ಲಿ, ತಮಗೆ ₹ 300 ಕೋಟಿಗೂ ಅಧಿಕ ಮೌಲ್ಯದ ಆಸ್ತಿ ಇದೆ ಎಂದು ಘೋಷಣೆ ಮಾಡಿದ್ದರು.

2018ರ ಚುನಾವಣೆಯಲ್ಲಿ ಬಿಜೆಪಿ, ಇದೇ ಕ್ಷೇತ್ರದಿಂದ ಪ್ರಸಾದ್ ಅವರನ್ನು ಕಣಕ್ಕಿಳಿಸಲು ಉದ್ದೇಶಿಸಿತ್ತು. ಆದರೆ, ಕಡೇ ಗಳಿಗೆಯಲ್ಲಿ ಅವರೇ ಆಸಕ್ತಿ ತೋರಲಿಲ್ಲ.

ಈ ಬಗ್ಗೆ ಪ್ರತಿಕ್ರಿಯೆಗೆ ರೆಡ್ಡಿ ಸಿಗಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.