ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

12ರಿಂದ ‘ಜ್ಞಾನ ಯಜ್ಞ’

Last Updated 10 ಡಿಸೆಂಬರ್ 2021, 22:48 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಕಬೀರ್‌ ಟ್ರಸ್ಟ್‌, ‘100 ದಿನಗಳ ಜ್ಞಾನ ಯಜ್ಞ’ ಕಾರ್ಯಕ್ರಮದ ಅಡಿಯಲ್ಲಿ2021–22ನೇ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗಾಗಿ 36ನೇ ವರ್ಷದ ಉಪನ್ಯಾಸ ತರಗತಿಗಳನ್ನು ಹಮ್ಮಿಕೊಂಡಿದೆ.

‘ಇದೇ 12ಕ್ಕೆ ಆರಂಭವಾಗಲಿರುವ ತರಗತಿಗಳು ಜೆ.ಸಿ.ನಗರದ ದೂರದರ್ಶನ ಕೇಂದ್ರದ ಹಿಂಭಾಗದಲ್ಲಿರುವ ಕಬೀರ್‌ ಆಶ್ರಮದಲ್ಲಿಪ್ರತಿದಿನ ಬೆಳಿಗ್ಗೆ 6ಕ್ಕೆ ನಡೆಯಲಿವೆ. ಡಿ.ವಿ.ನಾಗೇಶ್‌, ಕೈಲಾಶ್‌ ನೇಖರಾಜ್‌, ಗೋವಿಂದರಾಜ್‌, ಜಯಸಿಂಹ, ಲೋಕೇಶಪ್ಪ, ಗುರು‍ಪ್ರಸಾದ್‌ ಹಾಗೂ ಎಸ್‌.ಕೆ.ವರದರಾಜನ್‌ ಉಪನ್ಯಾಸ ನೀಡಲಿದ್ದಾರೆ’ ಎಂದು ಪ್ರಕಟಣೆ ತಿಳಿಸಿದೆ.

‘ಕಬೀರ್‌ ಆಶ್ರಮದ ಮಹಡಿ ಮೇಲಿರುವ ಐ–ಟೆಕ್‌ ಇನ್ಸ್‌ಟಿಟ್ಯೂಟ್‌ ಆಫ್‌ ಕಂಪ್ಯೂಟರ್ಸ್‌ ಕಚೇರಿಯಲ್ಲಿ ಪ್ರತಿದಿನ ಬೆಳಿಗ್ಗೆ 8ರಿಂದ ರಾತ್ರಿ 8 ಗಂಟೆಯವರೆಗೆಅರ್ಜಿಗಳನ್ನು ವಿತರಿಸಲಾಗುತ್ತದೆ’ ಎಂದೂ ಹೇಳಿದೆ.

ಹೆಚ್ಚಿನ ಮಾಹಿತಿಗೆ: 9845193425 ಅಥವಾ 9845011000.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT