ಕಾರವಾರ:ಕೈಗಾ ಅಣು ವಿದ್ಯುತ್ ಸ್ಥಾವರದ ಮೊದಲ ಘಟಕವು 941 ದಿನಗಳಿಂದ ನಿರಂತರ ವಿದ್ಯುತ್ ಉತ್ಪಾದಿಸಿ ಸೋಮವಾರ ಬೆಳಿಗ್ಗೆ 9.20ಕ್ಕೆ ವಿಶ್ವದಾಖಲೆ ಬರೆಯಿತು.ಈ ಮೂಲಕ ಇಂಗ್ಲೆಂಡ್‌ನ ಹೇಶಮ್ಅಣು ವಿದ್ಯುತ್ ಉತ್ಪಾದನಾ ಸ್ಥಾವರದ ದಾಖಲೆಯನ್ನು ಅಳಿಸಿ ಹಾಕಿತು. ಇದರ ಎರಡನೇ ಘಟಕವು2016ರ ಆಗಸ್ಟ್ 1ರವರೆಗೆ ನಿರಂತರ940 ದಿನ ಕಾರ್ಯಾಚರಣೆ ಮಾಡಿತ್ತು.

ಕೈಗಾ ಸ್ಥಾವರದ ಸಾಧನೆಯನ್ನುಪ್ರಧಾನಿ ನರೇಂದ್ರ ಮೋದಿ ಟ್ವಟರ್‌ನಲ್ಲಿ ಶ್ಲಾಘಿಸಿದ್ದಾರೆ. ‘ಭಾರತೀಯ ಎಂಜಿನಿಯರ್‌ಗಳು ಮತ್ತು ವಿಜ್ಞಾನಿಗಳಿಂದ ಮತ್ತೊಂದು ವಿಶ್ವದಾಖಲೆ. ಸ್ವದೇಶಿವಿನ್ಯಾಸದಕೈಗಾ ಒಂದನೇ ಘಟಕವು ನಿರಂತರವಾಗಿ 940 ದಿನಗಳ ಕಾರ್ಯಾಚರಣೆ ಮಾಡಿದೆ! ಇದು ಬಹುದೊಡ್ಡ ಸಾಧನೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

‘ಭಾರತೀಯ ಅಣು ವಿದ್ಯುತ್ಯೋಜನೆಗಳಲ್ಲಿ ತೊಡಗಿರುವ ಎಲ್ಲರಿಗೂ ಅಭಿನಂದನೆಗಳು. ಅವರ ದಣಿವರಿಯದ ಪ್ರಯತ್ನಗಳು ದೇಶದಅಭಿವೃದ್ಧಿಗೆ ಸಹಕಾರಿಯಾಗಿವೆ. ದೇಶವು ಅವರ ಬಗ್ಗೆ ಹೆಮ್ಮೆ ಪಡುತ್ತಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಘಟಕದ ರಿಯಾಕ್ಟರ್‌ಅನ್ನು ಡಿ.31ರವರೆಗೆ ಚಾಲನೆಯಲ್ಲಿಡಲುಭಾರತೀಯ ಪರಮಾಣು ಪ್ರಾಧಿಕಾರದ ಅಧಿಕಾರಿಗಳು ಅನುಮತಿ ನೀಡಿದ್ದಾರೆ.ಡಿ.30ರಂದುಕಾರ್ಯಾಚರಣೆಯನ್ನುಸ್ಥಗಿತಗೊಳಿಸಲಾಗುತ್ತದೆ. ಮುಂದಿನ 45 ದಿನ ವಿವಿಧ ನಿರ್ವಹಣಾ ಕೆಲಸಗಳನ್ನು ಮಾಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೈಗಾದಲ್ಲೇ 12 ಬಾರಿ

‘ಭಾರತೀಯ ಅಣು ವಿದ್ಯುತ್ ಸ್ಥಾವರಗಳು ಈವರೆಗೆ 28 ಬಾರಿ ಯಾವುದೇ ತಡೆಯಿಲ್ಲದೇಒಂದು ವರ್ಷಕ್ಕೂ ಅಧಿಕ ಕಾಲ ನಿರಂತರ ವಿದ್ಯುತ್ ಉತ್ಪಾದನೆ ಮಾಡಿವೆ. ನಾಲ್ಕು ಘಟಕಗಳಿರುವ ಕೈಗಾದಲ್ಲೇ12 ಬಾರಿ ಇಂತಹ ಸಾಧನೆ ಮಾಡಲಾಗಿದೆ. ಉಳಿದಂತೆ, ಚಾಲನೆಯಲ್ಲಿರುವ ಕೈಗಾದ ಮೊದಲ ಘಟಕ (941 ದಿನ), ರಾಜಸ್ತಾನದ ರಾವತ್‌ಬಾಟದಮೂರನೇ ಘಟಕ(777 ದಿನ) ಮತ್ತು ಐದನೇ ಘಟಕವು (765 ದಿನ) ಎರಡು ವರ್ಷಕ್ಕೂ ಅಧಿಕ ಕಾಲ ನಿರಂತರ ವಿದ್ಯುತ್ ಉತ್ಪಾದಿಸಿವೆ’ ಎಂದು ಭಾರತೀಯ ಪರಮಾಣು ವಿದ್ಯುತ್ ಪ್ರಾಧಿಕಾರದ (ಎನ್‌ಪಿಸಿಐಎಲ್)ಸಹ ನಿರ್ದೇಶಕ ಎ.ಕೆ.ನೇಮಾ ಪ್ರಕಟಣೆಯಲ್ಲಿವಿವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.