ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮನೆಗೆ ಮೇ 1ರಂದು ಹೊಸ ಅತಿಥಿಗಳು ಬಂದಿದ್ದಾರೆ! ಈ ಅತಿಥಿಗಳು ಯಾರು ಗೊತ್ತೇ? ಯಲಹಂಕ ಶಾಸಕ ವಿಶ್ವನಾಥ್ ಅವರು ನೀಡಿರುವ ಗಿರ್ ತಳಿಯ ಎರಡು ಹಸುಗಳು. ಶುಕ್ರವಾರ ಸಂಜೆ 5.45ಕ್ಕೆ ಯಡಿಯೂರಪ್ಪ ಹಾಗೂ ಅವರ ಕುಟುಂಬದವರು ಹಸುಗಳನ್ನು ಬರಮಾಡಿಕೊಂಡರು. ಮುಖ್ಯಮಂತ್ರಿಗಳ ಕಾವೇರಿ ನಿವಾಸದಲ್ಲಿ ಹಸುಗಳಿಗಾಗಿ ಪ್ರತ್ಯೇಕ ಶೆಡ್ ನಿರ್ಮಾಣ ಮಾಡಲಾಗಿದೆ